ಚೀನಾ ಜೂಮ್ ಬದಲು ಜಿಯೋ ಮೀಟ್

Jio meet
Published on

ನವದೆಹಲಿ: ರಿಲಯನ್ಸ್ ಜಿಯೋ ಸಂಸ್ಥೆಯು ವಿಡಿಯೋ ಕಾಲಿಂಗ್​ಗಾಗಿ ಜಿಯೋ ಮೀಟ್ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಜೂಮ್ ಗೂಗಲ್ ಮೀಟ್ ಮತ್ತು ಸ್ಕೈಪ್​ನಂತೆ ಸೌಲಭ್ಯ ಹೊಂದಿದ್ದು ಅದಕ್ಕಿಂತ ಹೆಚ್ಚಿನ ಸುರಕ್ಷತೆ ಹೊಂದಿದೆ ಎನ್ನಲಾಗಿದೆ.

ಜಿಯೋ ಮೀಟ್​ನಲ್ಲಿ 100 ಜನರೊಂದಿಗೆ ಒಂದೇ ಸಮಯದಲ್ಲಿ ಸಭೆ ನಡೆಸಬಹುದು. ಸಭೆ ನಡೆಯುವುದಕ್ಕೆ ಮೊದಲೇ ಶೆಡ್ಯುಲ್ ಮಾಡಿಡಬಹುದಾಗಿದೆ. ಬೇರೆ ವಿಡಿಯೋ ಕಾಲಿಂಗ್ ಆಪ್​ಗಳಿಗಿಂತ ಹೆಚ್ಚು ಜನರನ್ನು ಇದರಲ್ಲಿ ವಿಡಿಯೋ ಕಾಲ್ ಮೂಲಕ ಸಂರ್ಪಸ ಬಹುದಾಗಿದೆ.

ಎನ್ಕ್ರಿಪ್ಷನ್ ಕೂಡ ಮಾಡಲಾಗಿದ್ದು, ಹೆಚ್ಚಿನ ಸುರಕ್ಷತೆ ನೀಡಲಾಗಿದೆ. ಯಾವ ಸಮಯದಲ್ಲಾದರೂ ನೇರವಾಗಿ ಕಾಲ್​ನಲ್ಲಿ ಸೇರಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಕರೆಯಲ್ಲಿರುವಾಗಲೇ ಸ್ಕಿ›ೕನ್ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net