More

    ದೇಶಿಯವಾಗಿ ಸಿದ್ಧವಾಗಿರುವ ಮತ್ತೊಂದು ಕೋವಿಡ್​ ಚುಚ್ಚುಮದ್ದು ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ

    ನವದೆಹಲಿ: ಕೋವಿಡ್​-19 ಪಿಡುಗು ಹೆಚ್ಚಾಗುತ್ತಿರುವಂತೆ ವಿಶ್ವದಾದ್ಯಂತ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಅಭಿವೃದ್ಧಿಗೆ ಸಂಶೋಧಕರು ಶ್ರಮಿಸುತ್ತಿದ್ದಾರೆ. ಇದರ ಮಧ್ಯದಲ್ಲೇ ಭಾರತದ ಹೈದರಾಬಾದ್ ಮೂಲದ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ (ಬಿಬಿಐಎಲ್​) ಔಷಧ ಕಂಪನಿ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಚುಚ್ಚುಮದ್ದಿನ ಮಾನವರ ಮೇಲಿನ ಪ್ರಯೋಗಕ್ಕೆ ಭಾರತೀಯ ಔಷಧ ಮಹಾಪ್ರಧಾನ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದರು. ಇದರ ಬೆನ್ನಲ್ಲೇ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಮತ್ತೊಂದು ಚುಚ್ಚುಮದ್ದನ್ನು ಮಾನವರ ಮೇಲೆ ಪ್ರಯೋಗಿಸಲು ಡಿಸಿಜಿಐ ಅನುಮತಿ ನೀಡಿದೆ.

    ಗುಜರಾತ್​ನ ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಲಿಮಿಟೆಡ್​ ಕಂಪನಿ ಈ ಚಚ್ಚುಮದ್ದನ್ನು ಅಭಿವೃದ್ಧಿಪಡಿಸಿದೆ. ಆದರೆ ಚುಚ್ಚುಮದ್ದಿನ ಬಗ್ಗೆಯಾಗಲಿ ಅಥವಾ ಅದರ ಹೆಸರನ್ನಾಗಲಿ ಕಂಪನಿ ಬಹಿರಂಗಪಡಿಸಿಲ್ಲ. ಪ್ರಾಣಿಗಳ ಮೇಲೆ ಮಾಡಿದ 1 ಮತ್ತು 2ನೇ ಹಂತದ ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಚುಚ್ಚುಮದ್ದನ್ನು ಮಾನವರ ಮೇಲೆ ಪ್ರಯೋಗಿಸಲು ಕಂಪನಿಗೆ ಅನುಮತಿ ದೊರೆತಿದೆ.

    ಇದನ್ನೂ ಓದಿ: ಬಾಲಿವುಡ್​ನ ಹಿರಿಯ ಜನಪ್ರಿಯ ಕೊರಿಯೊಗ್ರಫರ್ ಸರೋಜ್ ಖಾನ್ ಇನ್ನಿಲ್ಲ

    ವಿಷಯ ತಜ್ಞರ ಸಮಿತಿಯ ಶಿಫಾರಸಿನ ಬಳಿಕ ಈ ಚುಚ್ಚುಮದ್ದಿಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

    ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಲಿಮಿಟೆಡ್​ ಇದಕ್ಕೂ ಮುನ್ನ ಬಿಳಿ ಇಲಿ, ಮೊಲ, ಗಿನಿಯಾ ಪಿಗ್​ ಮತ್ತು ಇಲಿಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಿದ ಬಳಿಕ ಇದನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts