

ಮುಂಬೈ: ಬಾಲಿವುಡ್ನ ದಿಗ್ಗಜ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಸದ್ಯ ತಮ್ಮ ಮುಂಬರುವ ದೇವರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಜೂ.ಎನ್ಟಿಆರ್ಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ನಟಿಯ ಸಂಭಾವನೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ದೇವರದಲ್ಲಿ ನಟಿಸಲು ಬರೋಬ್ಬರಿ 10 ಕೋಟಿ ರೂ. ಪೇಮೆಂಟ್ ಪಡೆದಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಇದು ನಿಜನಾ ಅಥವಾ ಸುಳ್ಳು ಸುದ್ದಿನಾ? ಹಾಗಾದ್ರೆ, ಸಿಕ್ಕ ಹಣವೆಷ್ಟು ಎಂಬುದರ ಮಾಹಿತಿ ಹೀಗಿದೆ..
ತೆಲುಗು ಚಿತ್ರರಂಗದ ಸ್ಟಾರ್ ಹೀರೋ ಜೂನಿಯರ್ ಎನ್ಟಿಆರ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಈ ವರ್ಷ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ದೇವರ ಮುಂಚೂಣಿಯಲ್ಲಿದೆ. ಸಿನಿಮಾದ ಹೊಸ ಶೆಡ್ಯೂಲ್ ಇಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಿದ್ದು, ನಟಿ ಜಾನ್ವಿ ಕೂಡ ಸೆಟ್‌ಗೆ ಹಾಜರಾಗಿದ್ದಾರೆ.
ದೇವರ ಚಿತ್ರದಲ್ಲಿ ನಟಿಸಲು ಜಾನ್ವಿ ಕೇಳಿದ್ದು ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಎಂದು ಹೇಳಲಾಗಿದೆ. ಈ ಮೊತ್ತವನ್ನು ಚಿತ್ರತಂಡ ಕೂಡ ಒಪ್ಪಿಕೊಂಡು, ಅವರು ಕೇಳಿದ ಪೇಮೆಂಟ್ ಅನ್ನು ಕೊಟ್ಟಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಕುರಿತಂತೆ ಅನೇಕರು ಭಾರೀ ಆಶ್ವರ್ಯ ವ್ಯಕ್ತಪಡಿಸಿದ್ದು, ಇಷ್ಟೊಂದು ಸಂಭಾವನೆ ನಟಿಗೆ ಸಿಕ್ಕಿರುವುದು ನಿಜವೇ? ಎಂದು ಪ್ರಶ್ನಿಸಿದ್ದಾರೆ.
ಈ ವದಂತಿಗಳ ಬೆನ್ನಲ್ಲೇ ವರದಿಯೊಂದು ಹೊರಬಿದ್ದಿದ್ದು, ದೇವರ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್ 10 ಕೋಟಿ ರೂ. ಪಡೆದಿಲ್ಲ. ಇದು ವದಂತಿಯಾಗಿದ್ದು, ನಟಿಗೆ ಸಿಕ್ಕ ಒಟ್ಟು ಸಂಭಾವನೆ ಕೇವಲ 6 ಕೋಟಿ ರೂ. ಎಂದು ತಿಳಿಸಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಂಚಂದರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).