More

    ಸರ್ಕಾರಿ ಬಂಗಲೆ ಖಾಲಿ ಮಾಡಿದ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ

    ನವದೆಹಲಿ: ಪ್ರಶ್ನೆಗಾಗಿ ಕಾಸು ಪ್ರಕರಣದಲ್ಲಿ ಲೋಕಸಭೆಯಿಂದ ಉಚ್ಚಾಟನೆಗೊಂಡ ಸಂಸದ ಮಹುವಾ ಮೊಯಿತ್ರಾ ಕೊನೆಗೂ ಸರಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಮತ್ತೊಮ್ಮೆ ಬಂಗಲೆಯನ್ನು ಖಾಲಿ ಮಾಡುವಂತೆ ಮಹುವಾ ಅವರಿಗೆ ನೋಟಿಸ್‌ ಕಳುಹಿಸಲಾಗಿತ್ತು. ನಂತರ ಮಹುವಾ ದೆಹಲಿ ಹೈಕೋರ್ಟ್‌ಗೆ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಮಹುವಾ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು.

    ಮಹುವಾ ಅವರ ಲೋಕಸಭಾ ಸದಸ್ಯತ್ವವನ್ನು ಡಿಸೆಂಬರ್ 8, 2023 ರಂದು ಹಿಂತೆಗೆದುಕೊಳ್ಳಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಬಳಿಕ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಎರಡು ಬಾರಿ ಮನವಿ ಮಾಡಿದರೂ ನಿರ್ಲಕ್ಷಿಸಿದ್ದರು. ಇದಾದ ಬಳಿಕ ತಕ್ಷಣವೇ ಬಂಗಲೆಯನ್ನು ಖಾಲಿ ಮಾಡುವಂತೆ ಮೂರನೇ ಬಾರಿಗೆ ಅವರಿಗೆ ನೋಟಿಸ್ ಕಳುಹಿಸಲಾಗಿತ್ತು. ಮಹುವಾ ಅವರಿಗೆ ಲೋಕಸಭಾ ಸಂಸದರಾಗಿ ಬಂಗಲೆ ನೀಡಲಾಗಿತ್ತು, ಆದರೆ ಅವರ ಸದಸ್ಯತ್ವ ರದ್ದಾದ ತಕ್ಷಣ ಬಂಗಲೆಯನ್ನು ಖಾಲಿ ಮಾಡುವಂತೆ ಕೇಳಲಾಯಿತು.

    ಪ್ರಶ್ನೆಗಾಗಿ ಕಾಸು ಪ್ರಕರಣದಲ್ಲಿ ಮಹುವಾ ತಪ್ಪಿತಸ್ಥ ಎಂದು ಸಂಸದೀಯ ಸಮಿತಿಯು ಈಗಾಗಲೇ ತೀರ್ಪು ನೀಡಿದೆ. ಮಹುವಾ ಮೊಯಿತ್ರಾ ಅವರು ತಮ್ಮ ಸಂಸದೀಯ ಲಾಗಿನ್-ಐಡಿ ಪಾಸ್‌ವರ್ಡ್ ಅನ್ನು ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಲಾಗಿನ್-ಐಡಿ ಪಾಸ್‌ವರ್ಡ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಮಹುವಾ ದುಬಾರಿ ಉಡುಗೊರೆಗಳು ಮತ್ತು ಹಣವನ್ನು ಪಡೆದಿದ್ದಾರೆ ಎಂದು ಸಮಿತಿಯು ಕಂಡುಹಿಡಿದಿದೆ. 

    ‘ಸರ್ಕಾರಿ ಬಂಗಲೆಯನ್ನು ಕೂಡಲೇ ತೆರವು ಮಾಡಿ’: ಕೇಂದ್ರದಿಂದ ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts