

ಭದ್ರಾವತಿ: ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ 24ನೇ ಪುಣ್ಯಸ್ಮರಣೆಯನ್ನು ಗುರುವಾರ ನಗರದ ಮಿಲಿಟರಿ ಕ್ಯಾಂಪಿನಲ್ಲಿರುವ ಪ್ರವಾಸಿ ಮಂದಿರಲ್ಲಿ ಆಚರಿಸಲಾಯಿತು. ನಗರಸಭಾ ಮಾಜಿ ಸದಸ್ಯ ಅಂಜನಪ್ಪ ಅವರು ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಜೆ.ಎಚ್.ಪಟೇಲರು ಮುಖ್ಯಮಂತ್ರಿಗಳಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದರು. ಅವರ ಆಡಳಿತಾತ್ಮಕ ನೀತಿ ನಿಲುವುಗಳು ಕಠಿಣವಾಗಿದ್ದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದರು. ರಾಜ್ಯ ಕಂಡ ಅಪ್ರತಿಮ ನಾಯಕರಲ್ಲಿ ಜೆ.ಎಚ್.ಪಟೇಲರೂ ಒಬ್ಬರು ಎಂದರು. ನಗರಸಭಾ ಸದಸ್ಯ ಬಿ.ಕೆ.ಮೋಹನ್, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿನಯ್ ರಾಜಾವತ್, ಶಶಿಕುಮಾರ್ ಗೌಡ, ನಿಂಗೇಗೌಡ, ಸಿದ್ದಲಿಂಗಯ್ಯ ಇತರರಿದ್ದರು.