ಜೇನುಕಲ್ಲಮ್ಮ ಜಾತ್ರೆ ಆರಂಭ

jenukalama
ರಿಪ್ಪನ್‌ಪೇಟೆ ಸಮೀಪದ ಕೋಡೂರು ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮನ ಜಾತ್ರೋತ್ಸವದಲ್ಲಿ ವಿಶೇಷಾಲಂಕಾರ ಮಾಡಿರುವುದು.
Published on

ರಿಪ್ಪನ್‌ಪೇಟೆ: ಹುಣ್ಣಿಮೆಯಿಂದ ಅಮವಾಸ್ಯೆವರೆಗೆ ನಡೆಯುವ ಕೋಡೂರು ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮನ ಜಾತ್ರೋತ್ಸವ ಮಂಗಳವಾರ ದೇವಿಗೆ ವಿಶೇಷ ಪೂಜೆಯೊಂದಿಗೆ ಪ್ರಾರಂಭಗೊಂಡಿತು. ಮಂಗಳವಾರದಿಂದ(ಅ.3) ಅಮಾವಾಸ್ಯೆವರೆಗೆ ಬರುವ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ, ಹೈನುಗಾರಿಕೆ, ಕೃಷಿ ಅಭಿವೃದ್ಧಿಗೆ ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ. ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಸ್ವಾಮಿರಾವ್, ಸದಸ್ಯರಾದ ವಿಜೇಂದ್ರರಾವ್, ಸುಧೀಂದ್ರಭಟ್, ಜಯಪ್ರಕಾಶ ಶೆಟ್ಟಿ, ಸ್ವಾಮಿ, ಗ್ರಾಪಂ ಅಧ್ಯಕ್ಷ ಉಮೇಶ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net