

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಸೆಪ್ಟೆಂಬರ್ 11 ರಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಅಭ್ಯರ್ಥಿಗಳು ntaresults.nic.in ವೆಬ್ಸೈಟ್ ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ ಫಲಿತಾಂಶ ಪರಿಶೀಲಿಸಬಹುದು.
ಸೆಪ್ಟೆಂಬರ್ 01 ರಿಂದ ಪರೀಕ್ಷೆ ಪ್ರಾರಂಭಗೊಂಡಿದ್ದು, ನಾಳೆ ಸೆಪ್ಟೆಂಬರ್ 6 ರಂದು ಕೊನೆಗೊಳ್ಳಲಿದೆ. ಜೆಇಇ ಮುಖ್ಯ ಪರೀಕ್ಷೆಗೆ ಈ ವರ್ಷ 8,58,273 ಅಭ್ಯರ್ಥಿಗಳು ನೋಂದಾಯಿಸಿದ್ದರು.