ಜೆಇಇ ಅಡ್ವಾನ್ಸ್ಡ್ 2024ರ ಫಲಿತಾಂಶ ಪ್ರಕಟ: ರಿಸಲ್ಟ್​ ಇಲ್ಲಿ ಚೆಕ್ ಮಾಡಿ!

jee result
Published on

ನವದೆಹಲಿ: 2024ನೇ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)-ಅಡ್ವಾನ್ಸ್ಡ್ ಫಲಿತಾಂಶಗಳನ್ನು ಭಾನುವಾರ ಪ್ರಕಟವಾಗಿದೆ. ಐಐಟಿ ದೆಹಲಿಯ ವೇದ್ ಲಹೋಟಿ ಅವರು 360 ಕ್ಕೆ 355 ಗಳಿಸುವ ಮೂಲಕ ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.

ಐಐಟಿ ಪ್ರವೇಶಕ್ಕಾಗಿ ಒಟ್ಟು 48,248 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅವರಲ್ಲಿ 7,964 ವಿದ್ಯಾರ್ಥಿನಿಯರಿದ್ದಾರೆ. ಈ ಬಾರಿಯ ಪರೀಕ್ಷೆಯನ್ನು ನಡೆಸಿದ ಐಐಟಿ ಮದ್ರಾಸ್‌‍ ಪ್ರಕಾರ, ಐಐಟಿ ಮುಂಬೈನ ದ್ವಿಜಾ ಪಟೇಲ್​ ಅವರು 360 ಅಂಕಗಳಿಗೆ 322 ಅಂಕಗಳೊಂದಿಗೆ ವಿದ್ಯಾರ್ಥಿನಿಯರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಆಕೆಯ ಅಖಿಲ ಭಾರತ ಶ್ರೇಣಿ 7 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್‌ 10 ರಲ್ಲಿರುವ ಇತರ ಅಭ್ಯರ್ಥಿಗಳಲ್ಲಿ: ಆದಿತ್ಯ (ಐಐಟಿ ದೆಹಲಿ),ಪೊಗಲ್‌ಪಲ್ಲಿ ಸಂದೇಶ್‌ (ಐಐಟಿ ಮದ್ರಾಸ್‌), ರಿದಮ್‌ ಕೆಡಿಯಾ (ಐಐಟಿ ರೂರ್ಕಿ), ಪುಟ್ಟಿ ಕುಶಾಲ್‌ ಕುಮಾರ್‌ (ಐಐಟಿ ಮದ್ರಾಸ್‌), ರಾಜ್‌ದೀಪ್‌ ಮಿಶ್ರಾ (ಐಐಟಿ ಬಾಂಬೆ), ಕೊಡೂರಿ ತೇಜೇಶ್ವರ್‌ (ಐಐಟಿ ಮದ್ರಾಸ್‌), ಹೇಮಂತ್‌ ದೋಷಿ (ಐಐಟಿ ಬಾಂಬೆ) ಮತ್ತು ಅಲ್ಲದಬೋನ ಎಸ್‌‍ಎಸ್‌‍ಡಿಬಿ ಸಿಧ್ವಿಕ್‌ ಸುಹಾಸ್‌‍ (ಐಐಟಿ ಮದ್ರಾಸ್‌). ಜೆಇಇ-ಮೇನ್‌, ಇದು ದೇಶಾದ್ಯಂತ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾಗಿದ್ದು, ಜೆಇಇ ಅಡ್ವಾನ್ಸ್ಡ್​ ಅರ್ಹತಾ ಪರೀಕ್ಷೆಯಾಗಿದೆ.

ದೇಶದ ವಿವಿಧ ಐಐಟಿಗಳಲ್ಲಿ ಐಐಟಿಗಳಲ್ಲಿ ಪ್ರವೇಶ ಪಡೆಯಲು ಜೆಇಇ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ನಡೆಸಲಾಗುತ್ತದೆ. ಈ ಬಾರಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಐಐಟಿ ಮದ್ರಾಸ್​ ವಹಿಸಿಕೊಂಡಿತ್ತು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ,ಮದ್ರಾಸ್‌ JEE Advanced 2024 result ಫಲಿತಾಂಶವನ್ನು jeeadv.ac.in ಪ್ರಕಟಿಸಲಿದೆ. ಈ ಜಂಟಿ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಜೆಇಇ ಅಡ್ವಾನ್ಸಡ್‌ 2024 ಪರೀಕ್ಷೆಯು ಮೇ ನಲ್ಲಿ ಎರಡು ಶಿಫ್ಟ್‌ನಲ್ಲಿ ನಡೆದಿತ್ತು. ಪೇಪರ್‌ 1 ಪರೀಕ್ಷೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆದಿತ್ತು. ಪತ್ರಿಕೆ 2 ಅನ್ನು ಮಧ್ಯಾಹ್ನ 2.30 ರಿಂದ 5.30 ರವರೆಗೆ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net