ಆದರ್ಶ ಬದುಕಿಗೆ ಮಾದರಿ ಜೇಡರದಾಸಿಮಯ್ಯ: ಕನ್ನಡ ಸಂರ್ಷ ಸಮಿತಿ ಅಧ್ಯಕ್ಷ ನಾಗರಾಜಸ್ವಾಮಿ ಬಣ್ಣನೆ

Vachana jyothi
Published on

ಬೆಂಗಳೂರು:'ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎಂದು ಹೇಳಿ, ಬದುಕನ್ನು ಕಾಯಕ ಹಾಗೂ ಆಧ್ಯಾತ್ಮಿಕತೆಯ ನೆಲೆಗಟ್ಟಿನೊಂದಿಗೆ ಜೇಡರದಾಸಿಮಯ್ಯ ಕಟ್ಟಿಕೊಟ್ಟಿದ್ದಾರೆ. ಮೌಲ್ಯಯುತ ಬದುಕು ನಡೆಸಿದ ವಚನಕಾರರು ನಮಗೆ ಸದಾ ಮಾದರಿಯಾಗಿದ್ದಾರೆ ಎಂದು ಕನ್ನಡ ಸಂರ್ಷ ಸಮಿತಿ ಅಧ್ಯಕ್ಷ ನಾಗರಾಜಸ್ವಾಮಿ ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗ ಕಲ್ಯಾಣ ಪಟ್ಟಣದ ಬಸವ ಬೆಳಕುವಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೇಡರದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಆದ್ಯ ವಚನಕಾರ ಎಂದು ಬಣ್ಣಿತರಾಗಿರುವ ಜೇಡರದಾಸಿಮಯ್ಯ ಅವರದ್ದು, ಆದರ್ಶ ಬದುಕಾಗಿದೆ. ನೇಕಾರಿಕೆಯೊಂದಿಗೆ ದಾಸೋಹವನ್ನು ಸತಿಯೊಂದಿಗೆ ನಡೆಸಿರುವುದು ಇಂದಿಗೂ ಮಾದರಿಯಾಗಿದೆ. ಅವರು ಧರ್ಮದ ಹಾದಿಯನ್ನು ತೋರುತ್ತಲೇ, ಜೀವನ ಸಾರ್ಥಕಗೊಳಿಸಬೇಕೆಂದು ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಕುಂತಲ ಬಾಗಲಕೋಟ್​, ಅಂಕಣಗಾರ ಪ್ರಭು ಇಸುವನಹಳ್ಳಿ, ಕವಿ ಗುಂಡೀಗೆರೆ ವಿಶ್ವನಾಥ್​ ಜೇಡರದಾಸಿಮಯ್ಯ ಕುರಿತು ವಿಚಾರ ಮಂಡಿಸಿದರು. ವಿದ್ಯಾರ್ಥಿಗಳು ವಚನಗಳ ಗಾಯನ ನಡೆಸಿದರು. ವಚನಜ್ಯೋತಿ ಬಳಗದ ಮುಖ್ಯ ಕಾರ್ಯನಿರ್ವಾಹಕ ರಾಜಾ ಗುರುಪ್ರಸಾದ್​, ಸಂಚಾಲಕರಾದ ರುದ್ರೇಶ್​, ಮಾಲತೇಶ ಮೇಟಿ, ದಿವಾಕರ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net