ರಾತ್ರಿ 12.30ಕ್ಕೆ ದೇವೇಗೌಡರಿಗೆ ಆಹ್ವಾನ ಪತ್ರಿಕೆ ಕಳಿಸಿತ್ತಾ ಸರ್ಕಾರ?

KEMPU
Published on

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿನಾಡಪ್ರಭು ಕೆಂಪೆಗೌಡರ ಪ್ರತಿಮೆಯ ಅನಾವರಣ ಕಾರ್ಯಕ್ರಮ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಶಿಷ್ಟಾಚಾರದೊಂದಿಗೆ ಆಹ್ವಾನಿಸದೆ ಇದ್ದದ್ದು ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯಿಂದ ಸಿಟ್ಟಿಗೆದ್ದ ಜೆಡಿಎಸ್ ಸಂಸದ ಟಿ. ಎ ಶರವಣ, ಪಕ್ಷದ ಕಾರ್ಯಕರ್ತರೊಂದಿಗೆ ಉದ್ಘಾಟನೆ ಆದ ಪ್ರತಿಮೆ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಸಂಸದ ಶರವಣ 'ಮುಖ್ಯಮಂತ್ರಿಗಳು ಶಿಷ್ಟಚಾರದೊಂದಿಗೆ ದೇವೇಗೌಡರಿಗೆ ಆಹ್ವಾನ ನೀಡಿಲ್ಲ. ಕಾರ್ಯಕ್ರಮಕ್ಕೆ ಒಂದು ದಿನ ಮೊದಲು ಮಧ್ಯರಾತ್ರಿ 12.30ಕ್ಕೆ ಚಾಲಕರೊಬ್ಬರ ಮೂಲಕ ಆಹ್ವಾನ ಪತ್ರಿಕೆ ಕಳಿಸಿದ್ದಾರೆ. ಅಷ್ಟೇ ಅಲ್ಲದೇ ಆಹ್ವಾನ ಪತ್ರಿಕೆಯಲ್ಲಿ ದೇವೇಗೌಡರ ಹೆಸರೇ ಇಲ್ಲ. ದೇಶದ ಮಾಜಿ ಪ್ರಧಾನಿ ಒಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ನಾಡಪ್ರಭುವಿಗೆ ಬಿಜೆಪಿ ಸರ್ಕಾರ ಅವಮಾನ ಮಾಡಿದೆ' ಎಂದು ಶರವಣ ಕೆಂಡ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net