

ಬೆಳ್ತಂಗಡಿ: ತಾಲೂಕಿನಲ್ಲಿ ಜೆಸಿಐ ಬೆಳ್ತಂಗಡಿ ವತಿಯಿಂದ ಜೇಸಿ ಸದಸ್ಯರಿಗೆ ಜೆಸಿಐ ಆ್ಯಕ್ಷನ್ ಫ್ರೇಮ್ ವರ್ಕ್ ತರಬೇತಿ ಕಾರ್ಯಗಾರ ನಡೆಯಿತು. ಜೇಸಿ ರಾಷ್ಟ್ರೀಯ ತರಬೇತುದಾರ ದೀಪಕ್ ರಾಜ್ ತರಬೇತಿ ನಡೆಸಿಕೊಟ್ಟರು. ಮಹಿಳಾ ಜೇಸಿ ಸಂಯೋಜಕಿ ಚಿತ್ರಪ್ರಭಾ, ಜೂನಿಯರ್ ಜೇಸಿ ಅಧ್ಯಕ್ಷೆ ದೀಪ್ತಿ ಕುಲಾಲ್, ನಿಕಟ ಪೂರ್ವಾಧ್ಯಕ್ಷ ರಂಜಿತ್ ಎಚ್.ಡಿ. ಮತ್ತು ಪೂರ್ವಾಧ್ಯಕ್ಷರು, ಜೇಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಅರುಣಾ ಜಯರಾಜ್ ಕಾರ್ಯಕ್ರಮ ಸಂಯೊಜಿಸಿದರು. ರಜತ್ ಮೋರ್ತಾಜೆ ತರಬೇತುದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ಶೈಲೇಶ್ ಕೆ. ವಂದಿಸಿದರು.