ರಾಣಿಪುರಂ ಪ್ರವಾಸೋದ್ಯಮ ಕೇಂದ್ರದಲ್ಲಿ ತರಬೇತಿ

New Project (3)
Published on

ಬದಿಯಡ್ಕ: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ನೇತೃತ್ವದಲ್ಲಿ ಮಾಲಿನ್ಯಮುಕ್ತ ನವ ಕೇರಳ ಅಭಿಯಾನದ ಭಾಗವಾಗಿ, ಅರಣ್ಯ ಸಂರಕ್ಷಣಾ ಸಮಿತಿಯ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಹಸಿರು ಕೇರಳ ಮಿಷನ್ ಸದಸ್ಯರಿಗೆ ರಾಣಿಪುರಂನ ಪರಿಸರ ಪ್ರವಾಸೋದ್ಯಮ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಗಿತ್ತು.

ವಿಭಾಗೀಯ ಅರಣ್ಯ ಅಧಿಕಾರಿ ಕೆ.ಅಶ್ರಫ್ ಉದ್ಘಾಟಿಸಿದರು. ಪನತ್ತ್ತಡಿ ಗ್ರಾಪಂ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶಿವದಾಸ್, ಪಂಚಾಯಿತಿ ಸದಸ್ಯೆ ಸಜಿನಿ ಸೌಮ್ಯ ಮೋಲ್, ಹಸಿರು ಕೇರಳಂ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಪಂಚಾಯಿತಿ ಕಾರ್ಯದರ್ಶಿ ಕೆ.ವಿಜಯಕುಮಾರ್, ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಮಧುಸೂದನನ್ ಮಾತನಾಡಿದರು. ವಿಭಾಗ ಅರಣ್ಯ ಅಧಿಕಾರಿ ಬಿ.ಶೇಷಪ್ಪ ಸ್ವಾಗತಿಸಿದರು. ವಿ.ಎಸ್.ಎಸ್. ಜಿಲ್ಲಾ ಸಂಯೋಜಕ ಕೆ.ಎನ್.ರಮೇಶ್ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಿಮಲ್‌ರಾಜ್ ಕೆ.ಬಾಲಚಂದ್ರನ್ ಮತ್ತು ಕೆ.ಕೆ.ರಾಘವನ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net