ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶೈಕ್ಷಣಿಕ ವರ್ಷದ ಕಲಿಕೋತ್ಸವ ಗುರುವಾರ ನಡೆಯಿತು. ರಕ್ಷಕ–ಶಿಕ್ಷಕ ಸಂಘದ ಅಧ್ಯಕ್ಷ ಶಾಫಿ ಚೂರಿಪಳ್ಳ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ ಉದ್ಘಾಟಿಸಿ, ವಿದ್ಯಾರ್ಥಿಗಳ ಈ ಶೈಕ್ಷಣಿಕ ವರ್ಷದ ಕಲಿಕಾ ಉತ್ಪನ್ನ, ಹಿರಿಮೆ ಪ್ರದರ್ಶಿಸುವ ವೇದಿಕೆಯಾಗಿ ಕಲಿಕೋತ್ಸವ ಮಹತ್ತರವಾದುದು. ಆಧುನಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಸಮಗ್ರ ಅರಿವಿನ ವಿಸ್ತಾರಕ್ಕೆ ಬೆಂಬಲ ನೀಡಿ ಬೆಳವಣಿಗೆಗೆ ಪೂರಕವಾಗಿದೆ. ಸದುಪಯೋಗ ಅಗತ್ಯ ಎಂದರು.
ಸಿ.ಆರ್.ಸಿ. ಸಂಯೋಜಕಿ ಭಾರತಿ ಮುಖ್ಯ ಅತಿಥಿಯಾಗಿದ್ದರು. ಶಾಲಾ ನೌಕರರ ಸಂಘದ ಕಾರ್ಯದರ್ಶಿ ಶಶಿಧರ, ಶಿಕ್ಷಕರಾದ ಕಾರ್ತಿಕ, ಸಿನಿ, ಪ್ರಭಾವತಿ ಶುಭ ಹಾರೈಸಿದರು. ವಿದ್ಯಾ, ತಂಗಮಣಿ, ಕೃಷ್ಣ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ನಿರಂಜನ ರೈ ಪೆರಡಾಲ ಸ್ವಾಗತಿಸಿದರು. ರಾಜೇಶ್ ಅಗಲ್ಪಾಡಿ ವಂದಿಸಿದರು. ಜ್ಯೋತ್ಸ್ನಾಟೀಚರ್, ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳ ವಿವಿಧ ವಿಷಯಗಳಲ್ಲಿ ಹಿರಿಮೆ ಪ್ರದರ್ಶನಗೊಂಡಿತು.
