ಸರ್ಕಾರಿ ಶಾಲೆ ದತ್ತು ಸ್ವೀಕಾರ : ಇರ್ವತ್ತೂರು ಪದವು ಶ್ರೀ ಶಾರದ ಸೇವಾಟ್ರಸ್ಟ್‌ನಿಂದ ಮೂಡುಪಡುಕೋಡಿ ವಿದ್ಯಾಲಯ ಅಭಿವೃದ್ಧಿ

blank

ಬಂಟ್ವಾಳ: ತಾಲೂಕಿನ ಇರ್ವತ್ತೂರು ಪದವು ಮತ್ತು ಮೂಡುಪಡುಕೋಡಿ ಪರಿಸರದಲ್ಲಿ 8 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವ ಇರ್ವತ್ತೂರು ಪದವಿನ ಶ್ರೀ ಶಾರದ ಸೇವಾ ಟ್ರಸ್ಟ್ ಮೂಡುಪಡುಕೋಡಿ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದೆ.

ಈ ಸರ್ಕಾರಿ ಶಾಲೆಯ ಅಭಿವೃದ್ದಿಯಲ್ಲಿ ಟ್ರಸ್ಟ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ತಾಲೂಕಿನಲ್ಲೇ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ದತ್ತು ಸ್ವೀಕರಿಸಿದೆ. ಟ್ರಸ್ಟ್‌ನ ಈ ನಿರ್ಧಾರಕ್ಕೆ ಶಾಲಾಭಿವೃದ್ಧಿ ಸಮಿತಿ, ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.

ಟ್ರಸ್ಟ್ ದತ್ತು ಸ್ವೀಕರಿಸುವ ಮುನ್ನವೇ ಹಲವು ವರ್ಷಗಳಿಂದ ಶಾಲೆಗೆ ಶಿಕ್ಷಕಿ ನೇಮಕ, ಶಾಲಾ ಮುಂಭಾಗ ಮಕ್ಕಳ ಸುರಕ್ಷತೆಗಾಗಿ ಬ್ಯಾರಿಕೇಡ್ ರಚನೆ, ಪ್ರತಿವರ್ಷ ಶಾಲೆಯಲ್ಲಿ ವನಮಹೋತ್ಸವ ಆಚರಿಸಿ ವಿದ್ಯಾರ್ಥಿಗೊಂದು ಸಸಿ ವಿತರಣೆ, ಎಲ್.ಕೆ.ಜಿ, ಯು.ಕೆ.ಜಿ. ಮಕ್ಕಳಿಗೆ ಪ್ರತಿದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ, ಶಾಲಾ ವಾರ್ಷಿಕೋತ್ಸವದಲ್ಲಿ ಸಹಭಾಗಿತ್ವ 9 ವರ್ಷಗಳಿಂದ ಶಾಲೆಯಲ್ಲಿ ಶ್ರೀಶಾರದೋತ್ಸವ ಆಚರಿಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ದಸರಾ ಕ್ರೀಡಾಕೂಟದ ಆಯೋಜನೆ, ಎನ್‌ಎಸ್‌ಎಸ್ ಶಿಬಿರದಲ್ಲಿ ಸಹಭಾಗಿತ್ವ, ರಕ್ತದಾನ, ಉಚಿತ ನೇತ್ರ, ದಂತ ಸಹಿತ ಆರೋಗ್ಯ ಶಿಬಿರಗಳು, ಕ್ಯಾನ್ಸರ್ ಕುರಿತ ಜಾಗೃತಿ ಶಿಬಿರ ಹಾಗೂ ಶಿಕ್ಷಣ ಇಲಾಖೆಯಿಂದ ನಡೆಯವಂತ ಎಲ್ಲ ರೀತಿಯ ಶೈಕ್ಷಣಿಕ ಚಟುವಟಿಕೆಯಲ್ಲಿ ಸಹಭಾಗಿತ್ವದ ಜತೆಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ.

ಭವಿಷ್ಯದಲ್ಲಿ ಶಾಲೆಗೆ ಬಯಲು ರಂಗಮಂದಿರ ನಿರ್ಮಾಣ, ಪರೀಕ್ಷಾ ಸಿದ್ಧತಾ ಶಿಬಿರ, ಮಕ್ಕಳಿಗೆ ಬೇಸಿಗೆ ಶಿಬಿರ, ಯೋಗ, ಭರತನಾಟ್ಯ, ಕರಾಟೆ, ಮಳೆಕೊಯ್ಲು ಸೇರಿದಂತೆ ಶಾಲೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಮಕ್ಕಳ ಸಮಗ್ರ ವಿಕಸನಕ್ಕೆ ಪೂರಕ ಯೋಜನೆಗಳನ್ನು ಶ್ರೀ ಶಾರದ ಸೇವಾಟ್ರಸ್ಟ್ ರೂಪಿಸಿದೆ. ಶಾಸಕ ರಾಜೇಶ್ ನಾಯ್ಕ ಶಿಫಾರಸಿನನ್ವಯ ಶಿಕ್ಷಣ ಇಲಾಖೆ ಕೂಡ ದತ್ತು ಸ್ವೀಕಾರಕ್ಕೆ ಅನುಮತಿ ನೀಡಿದೆ. 2025-26ರ ಶಾಲಾ ಶೈಕ್ಷಣಿಕ ವರ್ಷದಿಂದಲೇ ಶಾಲೆಯನ್ನು ದತ್ತು ಸ್ವೀಕರಿಸಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಂದಡಿ ಇಟ್ಟಿದೆ.

1954ರ ಆರಂಭಿಕ ಹಂತದಲ್ಲಿ ಈ ಶಾಲೆ ಉರ್ದು ಶಾಲೆಯಾಗಿ ಆರಂಭಗೊಂಡಿತ್ತು. ಬಳಿಕ ಈ ಉರ್ದು ಶಾಲೆ ಕಾವಳಕಟ್ಟೆಗೆ ಸ್ಥಳಾಂತರಗೊಂಡಿದ್ದು, ಸ್ಥಳೀಯ ಹಿರಿಯರ ಮುತುವರ್ಜಿಯಿಂದ ಬಳಿಕ ಮೂಡುಪಡುಕೋಡಿ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಚಾಲ್ತಿಗೆ ಬಂದಿದೆ. ಪ್ರಸ್ತುತ ಒಟ್ಟು 250 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಅತಿದೊಡ್ಡ ಆಟದ ಮೈದಾನ

2016-17ನೇ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ 2024-25ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭಗೊಂಡಿದೆ. ಸುಮಾರು 1.65 ಎಕರೆ ವಿಸ್ತೀರ್ಣದ ಜಮೀನನ್ನು ಈ ಶಾಲೆ ಹೊಂದಿದೆ. ಗ್ರಾಮೀಣ ಭಾಗದಲ್ಲಿರುವ ಶಾಲೆಗಳ ಪೈಕಿ ಮೂಡುಪಡುಕೋಡಿ ಶಾಲೆಯು ಅತಿದೊಡ್ಡ ಮೈದಾನ ಹೊಂದಿದೆ. ಈ ಶಾಲೆಯ ಸುಮಾರು ಒಂದೂವರೆ ಕಿ.ಮೀ. ಆಸುಪಾಸಿನಲ್ಲಿ ಮೂರು ಖಾಸಗಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯನ್ನು ಹೊಂದಿದ್ದರೆ, ಸುಮಾರು ಎರಡೂವರೆ ಕಿ.ಮೀ. ದೂರದಲ್ಲಿ ವಾಮದಪದವು ಮತ್ತು ನಯನಾಡು ಎಂಬಲ್ಲಿ ಸರ್ಕಾರಿ ಪ್ರೌಢಶಾಲೆಗಳಿವೆ.

ಮಕ್ಕಳ ಕೊರತೆಯಿಲ್ಲ

ಬಂಟ್ವಾಳ ಅಸುಪಾಸಿನ ವಿವಿಧ ಖಾಸಗಿ ಶಾಲೆಯ 7 ಬಸ್‌ಗಳು ಇರ್ವತ್ತೂರು ಪದವು, ಮೂಡುಪಡುಕೋಡಿಗೆ ಬಂದು ವಿದ್ಯಾರ್ಥಿಗಳನ್ನು ಪಿಕಪ್ ಮಾಡಿಕೊಂಡು ಹೋಗುತ್ತದೆ. ಆದರೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಎಲ್ಲ ಬೆಳವಣಿಗೆಯ ನಡುವೆ ಮತ್ತು ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳ ಕೊರತೆ ಸಹಿತ ವಿವಿಧ ಕಾರಣಗಳಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವಾಗ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 250 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ.

blank

ಕೊಲ್ಲಮೊಗ್ರು ದೋಲನ ಮನೆಯಲ್ಲಿ ನೇಮೋತ್ಸವ

ಆದಿವಾಸಿ ಕುಟುಂಬಗಳಿಗೆ 78 ವರ್ಷಗಳ ಬಳಿಕ ಬೆಳಕು : ಬೆಳ್ತಂಗಡಿಯ ಪಂಜಾಲ, ಮಾಳಿಗೆಬೈಲಿನ 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…