Darling Prabhas ನಟನೆಯ ಫೌಜಿ ಚಿತ್ರತಂಡಕ್ಕೆ ಸೇರ್ಪಡೆಯಾದ ‘ಈ ಬಂಧನ’ದ ನಟಿ

Actress Jaya Prada, Actor Prabas, Actress Imanvi
Published on

ಹೈದರಾಬಾದ್​​: ಟಾಲಿವುಡ್​ ಡಾರ್ಲಿಂಗ್​ ಮುಂದಿನ ಸಿನಿಮಾ ಫೌಜಿ ಎಂಬುದು ಗೊತ್ತೆ ಇದೆ. ಪ್ರಸ್ತುತ ರೆಬಲ್​ ಸ್ಟಾರ್​​ ಪ್ರಭಾಸ್ (Darling Prabhas)​​ ಮತ್ತು ನಟಿ ಇಮಾನ್ವಿಯೊಂದಿಗೆ ಫೌಜಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಸಿನಿಮಾದ ಆರಂಭಿಕ ಚಿತ್ರೀಕರಣವು ಪ್ರಸ್ತುತ ಮಧುರೈನಲ್ಲಿ ನಡೆಯುತ್ತಿದ್ದು, ಈಗಾಗಲೇ ಇಡೀ ಚಿತ್ರತಂಡ ಮಧುರೈನಲ್ಲಿ ಒಟ್ಟಗೂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಫೌಜಿ ಸಿನಿಮಾವು 1940ರ ಬ್ರಿಟಿಷ್​ ಹಿನ್ನೆಲೆಯಲ್ಲಿ ಆಧರಿಸಿದ ಪಿರಿಯಾಡ್​​​ ಡ್ರಾಮಾ ಎನ್ನಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್​​ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಸಿನಿಮಾದಲ್ಲಿನ ಪ್ರಭಾಸ್ ಅವರ ಫಸ್ಟ್​​ಲುಕ್​​​ ಅನ್ನು ರಿವೀಲ್ ಮಾಡಲಾಗುವುದು ಎಂದು ವರದಿಯಾಗಿದೆ.

 Fauji Film Team

ಈ ಆಕ್ಷನ್-ಡ್ರಾಮಾದಲ್ಲಿ ಮಿಥುನ್ ಚಕ್ರವರ್ತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Actor Mitun Chakraborty

ಇನ್ನೂ ಫೌಜಿ ತಂಡಕ್ಕೆ 70 ಮತ್ತು 80ರ ದಶಕದ ಪ್ರಮುಖ ನಟಿಯಾಗಿರುವ ಜಯಪ್ರದಾ ಕೂಡ ನಾಯಕ ನಟ ಪ್ರಭಾಸ್ ಮತ್ತು ನಟಿ ಇಮಾನ್ವಿ ಅವರೊಂದಿಗೆ ಶೂಟಿಂಗ್ ಶೆಡ್ಯೂಲ್‌ಗೆ ಸೇರ್ಪಡೆಗೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ.

Actress Jaya Prada

ಪ್ರಭಾಸ್​ ಅವರ ಈ ಬಿಸಿ ಸೆಡ್ಯೂಲ್​​​ನಿಂದಾಗಿ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್​ ಕಟ್​​​ ಮುಂಬರುವ ಹಾರರ್-ಕಾಮಿಡಿ 'ದಿ ರಾಜಾಸಾಬ್' ಸಿನಿಮಾದ ಹಲವು ದೃಶ್ಯಗಳನ್ನು ಪ್ರಭಾಸ್ ಇಲ್ಲದೆ ಚಿತ್ರೀಕರಿಸಲು ಚಿತ್ರತಂಡ ಯೋಜಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net