ಅಭಿ-ಐಶು ವಿಚ್ಛೇದನ ವದಂತಿ ನಡುವೆಯೇ ನನ್ನ ಹೆಸರ ಮುಂದೆ ಅಮಿತಾಭ್​ ಏಕೆ ಎಂದ ಜಯಾ ಬಚ್ಚನ್​

Jaya Bachchan
Published on

ನವದೆಹಲಿ: ಬಾಲಿವುಡ್​ನ ದಿ ಮೋಸ್ಟ್​ ಫೇವರಿಟ್​ ರಿಯಲ್​ ಲೈಫ್​ ಕಪಲ್​ ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ಅಮಿತಾಭ್​ ಹಾಗೂ ಜಯಾ ಬಚ್ಚನ್​ ಅವರದ್ದು. ಆದರೆ, ಇದೀಗ ಬಾಲಿವುಡ್​ನ ಹಿರಿಯ ನಟಿ, ರಾಜ್ಯಸಭೆ ಸದಸ್ಯರ ಜಯಾ ಬಚ್ಚನ್​ ತಮ್ಮ ಹೆಸರಿನ ಜೊತೆ ಅಮಿತಾಭ್​ ಹೆಸರು ಸೇರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಘಟನೆ ನಡೆದಿದೆ. ಈ ಸುದ್ದಿ ಸದ್ಯ ಹೊಸ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್​ ಬಚ್ಚನ್​ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಬಿ ಟೌನ್ ಅಂಗಳದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಹಲವು ನಿದರ್ಶನಗಳ ನಮ್ಮ ಕಣ್ಣ ಮುಂದಿವೆ. ಇದೀಗ ಜಯಾ ಬಚ್ಚನ್​ ತಮ್ಮ ಹೆಸರಿನ ಮುಂದೆ ಅಮಿತಾಬ್​ ಹೆಸರನ್ನು ಸೇರಿಸಬೇಡಿ ಎಂದು ಸಂಸತ್​ ಅಧಿವೇಶನದಲ್ಲೇ ಗರಂ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಹಾಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಸಮಾಜವಾದಿ ಪಕ್ಷದ ಸಂಸದೆ (ರಾಜ್ಯಸಭೆ) ಜಯಾ ಬಚ್ಚನ್​ ಅವರನ್ನು ಉಪಸಭಾಪತಿ ಹರಿವಂಶ್​ ನಾರಾಯಣ್​ ಸಿಂಗ್​ ಅವರು, ಶ್ರೀಮತಿ ಜಯಾ ಅಮಿತಾಭ್​ ಬಚ್ಚನ್​ ನಿಮ್ಮ ಸರದಿ ಎಂದು ಕರೆದಿದ್ದಾರೆ. ಇದಕ್ಕೆ ಉತ್ತರಿಸಿದ ಜಯಾ, ನನ್ನನ್ನು ಜಯಾ ಬಚ್ಚನ್ ಅಂತ ಕರೆದರೆ ಸಾಕು ಎಂದು ಹೇಳಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಟ್ಟ ಉಪಸಭಾಪತಿ ಇಲ್ಲಿ ಪೂರ್ಣ ಹೆಸರು ನಮೂದಿಸಿದ್ದಾರೆ, ಆದ್ದರಿಂದಲೇ ಪೂರ್ಣ ಹೆಸರು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಉಪಸಭಾಪತಿಗಳ ಪ್ರತಿಕ್ರಿಯೆಗೆ ಮತ್ತಷ್ಟು ಅಸಮಾಧಾನಗೊಂಡ ಜಯಾ ಬಚ್ಚನ್, ಮಹಿಳೆಯರಿಗೆ ಅವರದ್ದೆ ಆದ ಸ್ಥಾನಮಾನಗಳಿವೆ. ಅವರದ್ದದೆ ಆದ ಸಾಧನೆಗಳನ್ನು ಮಾಡಿರುತ್ತಾರೆ. ಪತಿ ಹೆಸರು ಸೇರಿಸಿ ಹೇಳುವ ಅವಶ್ಯಕತೆ ಇಲ್ಲ. ಹಾಗಾಗಿ ಜಯಾ ಬಚ್ಚನ್​ ಸಾಕು ಎಂದು ಹೇಳಿದ್ದಾರೆ.

ಬಾಲಿವುಡ್​ ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಜಯಾ ಬಚ್ಚನ್ ಅವರು ಆ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಸಮಾಜವಾದಿ ಪಕ್ಷದಿಂದ ಐದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಹಿಳೆಯ ಹಕ್ಕುಗಳ ಬಗ್ಗೆ ನಿರಂತರವಾಗಿ ಧ್ವನಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net