ಕಾವಾಲಯ್ಯ ಫೀವರ್: ಭರ್ಜರಿ ಸ್ಟೆಪ್ಸ್‌ ಹಾಕಿದ ಜಪಾನ್ ರಾಯಭಾರಿ

japan
Published on

ಜಪಾನ್: ರಜನಿಕಾಂತ್, ತಮನ್ನಾ ಭಾಟಿಯಾ ನಟನೆಯ " ಜೈಲರ್ " ಚಿತ್ರದ ಕಾವಾಲಯ್ಯ ಸಾಂಗ್​ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಟ್ರೆಂಡಿಂಗ್​​​ನಲ್ಲಿದೆ. ತಮನ್ನಾ ಈ ಸಾಂಗ್​​​ನಲ್ಲಿ ತಮ್ಮ ಅತ್ಯಾಕರ್ಷಕ ಸ್ಟೆಪ್ಸ್​​​​ನಿಂದ ಪಡ್ಡೆಗಳ ಮನ ಗೆದ್ದಿದ್ದಾರೆ. ತಮನ್ನಾ ಅವರ ಲುಕ್​, ಆಕರ್ಷಕ ಹುಕ್‌ಸ್ಟೆಪ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೀಗ ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಈ ಸಾಂಗ್​​​ಗೆ ಹೆಜ್ಜೆ ಹಾಕಿದ್ದಾರೆ. ಹಿರೋಷಿ ಸುಜುಕಿ ಜಪಾನೀಸ್ ಯುಟ್ಯೂಬ‌ರ್ ಮೇಯೊ ಸ್ಯಾನ್‌ನೊಂದಿಗೆ ಕಾವಾಲಯ್ಯ ಗೀತೆಗೆ ಭರ್ಜರಿ ಸ್ಟೆಪ್ ಹಾಕಿದ್ದು, ವಿಡಿಯೋ ನೋಡುಗರ ಮನಗೆದ್ದಿದೆ.
ಹಿರೋಷಿ ಸುಜುಕಿ "ರಜನಿಕಾಂತ್ ಅವರ ಮೇಲಿನ ನನ್ನ ಪ್ರೀತಿ ಮುಂದುವರಿಯುತ್ತದೆ'' ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಹೆಜ್ಜೆಹಾಕಿದ ಪ್ರತಿಭಾವಂತ ಜಪಾನೀ ನೃತ್ಯಗಾರರು
ಎರಡು ದಿನಗಳ ಹಿಂದೆಯಷ್ಟೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೈರಲ್ ವಿಡಿಯೋದಲ್ಲಿ ಇಬ್ಬರು ಪ್ರತಿಭಾವಂತ ಜಪಾನೀ ನೃತ್ಯಗಾರರು ಐಕಾನಿಕ್ ಟೋಕಿಯೊ ನಿಲ್ದಾಣದ ಹೊರಗೆ ಕಾವಾಲಯ್ಯ ಸಾಂಗ್​​​ಗೆ ಹೆಜ್ಜೆ ಹಾಕಿರುವುದನ್ನು ನೋಡಬಹುದು. ಹಾಡಿನ ಕೊರಿಯೋಗ್ರಫಿಯನ್ನು ಹೆಜ್ಜೆ ಹೆಜ್ಜೆಗೂ ಅನುಕರಿಸುವ ನೃತ್ಯಗಾರರ ಬದ್ಧತೆ ಎಲ್ಲೆಡೆ ಇಂಟರ್ನೆಟ್ ಬಳಕೆದಾರರ ಗಮನ ಮತ್ತು ಪ್ರಶಂಸೆಗೆ ಪಾತ್ರವಾಗಿದೆ.

ಗಡಿಯಾಚೆಯೂ ಹವಾ ಸೃಷ್ಟಿಸಿದ ಗೀತೆ
' ಜೈಲರ್ ' ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಆಕರ್ಷಕವಾದ ನೃತ್ಯ ಇಂಟರ್ನೆಟ್‌ನಲ್ಲಿ ಪ್ರತಿಯೊಬ್ಬರನ್ನು ವಿಸ್ಮಯಗೊಳಿಸಿದೆ. ಆಕೆಯ ಸ್ಟೈಲಿಶ್ ಕರ್ಲ್ಸ್, ಹೆಜ್ಜೆ ಎಂಥವರನ್ನು ಬೆರಗುಗೊಳಿಸುತ್ತದೆ. ಒಟ್ಟಾರೆ 'ಜೈಲರ್' ಚಿತ್ರದ ಹಿಟ್ ಹಾಡು ಕಾವಾಲಯ್ಯ ಗಡಿ ಮತ್ತು ಸಂಸ್ಕೃತಿ ಮೀರಿ ಖ್ಯಾತಿ ಗಳಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net