More

  ಸ್ಥಳೀಯರು ನೋಡ ನೋಡುತ್ತಿದ್ದಂತೆಯೇ ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿಯನ್ನು ಬೆನ್ನಟ್ಟಿ ಬಂಧಿಸಿದ ಪೊಲೀಸರು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

  ಫರಿದಾಬಾದ್: ಹರಿಯಾಣ ರಾಜ್ಯವನ್ನು ಬೆಚ್ಚಿಬೀಳಿಸಿದ ನುಹ್ ಹಿಂಸಾಚಾರದ ಅರ್ಧ ತಿಂಗಳ ನಂತರ, ಪ್ರಮುಖ ಸಂಚುಕೋರ ಮತ್ತು ಬಜರಂಗದಳದ ಸದಸ್ಯ, ಬಿಟ್ಟು ಬಜರಂಗಿಯನ್ನು ಮಂಗಳವಾರ ಫರಿದಾಬಾದ್‌ನಲ್ಲಿ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ.

  ವರದಿಗಳ ಪ್ರಕಾರ, ‘ಬ್ರಿಜ್ ಮಂಡಲ್ ಯಾತ್ರೆ’ ಪ್ರಾರಂಭವಾಗುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ ಆರೋಪವೂ ಬಿಟ್ಟು ಬಜರಂಗಿ ಮೇಲಿದೆ. ನುಹ್ ಹಿಂಸಾಚಾರ ನಡೆದಾಗ ಬಜರಂಗದಳದ ರಾಲಿಯಲ್ಲಿ ಬಿಟ್ಟು ಬಜರಂಗಿ ಇದ್ದರು. ಘರ್ಷಣೆಯ ವೇಳೆ ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದು, ಇದಕ್ಕಾಗಿ ಅವರನ್ನು ಮಂಗಳವಾರ ಬಂಧಿಸಲಾಗಿದೆ.

  ಸಿಸಿಟಿವಿ ದೃಶ್ಯಾವಳಿಯಲ್ಲಿ ಫಾರ್ಮಲ್ಸ್​ನಲ್ಲಿದ್ದ ಪೊಲೀಸರು ಕೋಲು ಮತ್ತು ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿ ಆತನನ್ನು ಹಿಡಿಯುತ್ತಿರುವುದನ್ನು ನೋಡಬಹುದು. ಸ್ಥಳೀಯರು ನೋಡುತ್ತಿದ್ದಂತೆಯೇ ಕನಿಷ್ಠ 15-20 ಪೊಲೀಸರು ಲುಂಗಿಯಲ್ಲಿದ್ದ ಬಿಟ್ಟು ಬಜರಂಗಿಯನ್ನು ಬೆನ್ನಟ್ಟಿದ್ದಾರೆ.
  ಬಿಟ್ಟು ಬಜರಂಗಿ ಮೇಲೆ ಗಲಭೆ, ಹಿಂಸಾಚಾರ, ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಅಧಿಕಾರಿಯನ್ನು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಮಾರಕ ಆಯುಧದಿಂದ ಹಾನಿ ಮಾಡಿದ ಆರೋಪವಿದೆ.

  “ವಿಚಾರಣೆಯ ನಂತರ ನುಹ್ ಪೊಲೀಸರು ಬಿಟ್ಟು ಬಜರಂಗಿಯನ್ನು ಬಂಧಿಸಿದ್ದಾರೆ. ಬಿಟ್ಟು ಬಜರಂಗಿ ಮತ್ತು ಇತರ 15-20 ಜನರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಠಾಣಾ ಸದರ್ ನುಹ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿಟ್ಟು ಬಜರಂಗಿ ಮತ್ತು ಇತರ 15-20 ಜನರು ಕತ್ತಿಯಂತಹ ಆಯುಧಗಳೊಂದಿಗೆ ನುಹ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮುಂದೆ ಘೋಷಣೆಗಳನ್ನು ಕೂಗಿದರು, ”ಎಂದು ಫರಿದಾಬಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

  ಉಳಿದವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಅಥವಾ ದಾರಿತಪ್ಪಿಸುವ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts