

ಟೋಕಿಯೋ: ಜಪಾನಿನ ನಟಿ ಮತ್ತು ಗಾಯಕಿ ಮಿಹೋ ನಕಾಯಾಮಾ(54) ಅವರ ಟೋಕಿಯೋ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ( Actress dead in bathtub). ನಕಾಯಾಮಾ ಶುಕ್ರವಾರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಾಗಿತ್ತು. ಅಲ್ಲಿಗೆ ಹೋಗುವ ಮೊದಲೆ ಅವರು ತಮ್ಮ ಮನೆಯಲ್ಲಿದ್ದ ಬಾತ್‌ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪರಿಚಿತರೊಬ್ಬರು ಆ್ಯಂಬುಲೆನ್ಸ್ಗೆ ಕರೆಮಾಡಿದರಾದರೂ ಅಲ್ಲೇ ಇದ್ದಂತಹ ಟ್ರೈನಿವೈದ್ಯರು ನಟಿಯು ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಒಸಾಕಾದಲ್ಲಿ ಕ್ರಿಸ್‌ಮಸ್ ಪಾರ್ಟಿಯಲ್ಲಿ ನಕಾಯಾಮಾ ಪ್ರದರ್ಶನ ನೀಡಲು ನಿರ್ಧರಿಸಲಾಗಿತ್ತು. ಆರೋಗ್ಯ ಕಾರಣದಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಅವರ ತಂಡವು ನಟಿಯ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ನಿಧನದ ಸುದ್ದಿಯನ್ನು ತಿಳಿಸಿದ್ದಾರೆ. ಸದ್ಯ ಬಾತ್‌ಟಬ್‌ನಲ್ಲಿ ಮೃತದೇಹ ಪತ್ತೆಯಾದ್ದರಿಂದ ಸಾವಿಗೆ ಕಾರಣ ಏನಿರಬಹುದೆಂದು ತನಿಖೆ ಮುಂದುವರಿದಿದೆ.
ಸುದ್ದಿ ತಿಳಿದು ಅಭಿಮಾನಿಗಳು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ನಕಾಯಾಮಾ 1980 ಮತ್ತು 90ರ ದಶಕಗಳಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಆದರೆ 1995ರಲ್ಲಿ ತೆರೆಕಂಡ ‘ಲವ್ ಲೆಟರ್’ ಚಿತ್ರದ ಮೂಲಕ ಅವರು ಹೆಚ್ಚು ಜನಪ್ರಿಯರಾದರು. 'ಟೋಕಿಯೋ ವೆದರ್' (1997) ನಂತಹ ಚಲನಚಿತ್ರದಲ್ಲಿಯೂ ಕಾಣಿಸಿಕೊಂಡರು. ಜಪಾನ್‌ನ ಸಾಕುದಲ್ಲಿ ಜನಿಸಿದ ನಕಯಾಮಾ 1985ರ ನಾಟಕ 'ಮೈಡೊ ಒಸವಾಗಸೆ ಶಿಮಾಸು' ನಲ್ಲಿ ತನ್ನ ಮೊದಲ ನಟನೆಯನ್ನು ಮಾಡಿದರು.
ತನ್ನ ವೃತ್ತಿಜೀವನದುದ್ದಕ್ಕೂ, ನಕಯಾಮಾ ಜಪಾನ್‌ನ ಅತಿದೊಡ್ಡ ತಾರೆಗಳಲ್ಲಿ ಒಬ್ಬರು ಎಂದು ಖ್ಯಾತಿ ಪಡೆದರು. ಚಲನಚಿತ್ರ, ದೂರದರ್ಶನ ಮತ್ತು ಸಂಗೀತದಲ್ಲಿನ ಅವರ ಸಾಧನೆಗಳಿಗಾಗಿ ಗುರುತಿಸಲ್ಪಟ್ಟರು. 'ಲವ್ ಲೆಟರ್' ನಲ್ಲಿನ ಅವರ ಅಭಿನಯವು ಬ್ಲೂರಿಬ್ಬನ್ ಪ್ರಶಸ್ತಿಗಳು ಮತ್ತು ಹೋಚಿ ಫಿಲ್ಮ್ ಅವಾರ್ಡ್ಸ್ ಎರಡರಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗಳಿಸಿತು. ಈ ಚಲನಚಿತ್ರವು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗಳನ್ನು ಗೆದ್ದಿತು.(ಏಜೆನ್ಸೀಸ್)