ವಧುವಿನೊಂದಿಗೆ ಶಾರೂಖ್​​​ ಮಸ್ತ್​ ಡ್ಯಾನ್ಸ್​​.. ಮದುವೆಗೆ ಹಾಜರಾಗಲು ನಟ ಪಡೆದಿರುವ ಹಣವೆಷ್ಟು?; ಗೊತ್ತಾದ್ರೆ ಶಾಕ್​ ಆಗ್ತೀರಾ.. | Shah Rukh Khan

Untitled design - 2024-12-07T182114.691
Published on

ನವದೆಹಲಿ: ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ಪ್ರಪಂಚದಾದ್ಯಂತ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಟೌನ್​ ಕಿಂಗ್​ಖಾನ್​ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದರು. ವಧು-ವರರ ಜತೆ ಫ್ಲರ್ಟ್ ಮಾಡುವುದರೊಂದಿಗೆ ವೇದಿಕೆಯ ಮೇಲೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಸದ್ಯ ಮದುವೆಯಲ್ಲಿ ಶಾರೂಖ್​ ಶೋ ನೀಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಬಿಸಿಬಿಸಿ ಚರ್ಚೆ ಹುಟ್ಟಿಕೊಂಡಿದೆ.

ವಿಡಿಯೋವನ್ನು ವಧುವಿನ ಮೇಕಪ್ ಕಲಾವಿದೆ ಅಮೃತಾ ಕೌರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಪೋಸ್ಟ್​​​ ಮಾಡುವಾಗ ಅಮೃತಾ ಅವರು ಶಾರೂಖ್​ ಖಾನ್ ನೀವು ವಧುವನ್ನು ಹೊಗಳಿದ ರೀತಿ ನನ್ನ ಕಠಿಣ ಪರಿಶ್ರಮಕ್ಕೆ ಫಲ ನೀಡಿದೆ ಎಂದು ಬರೆದಿದ್ದಾರೆ.

ಈ ವಿಡಿಯೋಗೆ ಶಾರುಖ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.ವಧು ಅದೃಷ್ಟಶಾಲಿ ಆದರೆ ಯಾರಾದರೂ ನನ್ನ ಕನಸನ್ನು ಬದುಕಿಸಬಾರದೆ, ಈ ಮದುವೆಯಲ್ಲಿ ಭಾಗವಹಿಸಲು ಶಾರೂಖ್ ಎಷ್ಟು ಹಣವನ್ನು ತೆಗೆದುಕೊಂಡಿರಬಹುದು, ಶಾರೂಖ್​ ಕನಿಷ್ಠ 60 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಂಡಿರಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ಅಮೃತಾ, ಅವರು ಫ್ಯಾಮಿಲಿ ಫ್ರೆಂಡ್ ಎಂದಿದ್ದಾರೆ.

ಶಾರೂಖ್ ಸದ್ಯ ಕಿಂಗ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಪುತ್ರಿ ಸುಹಾನಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆನಿಮೇಟೆಡ್ ಚಲನಚಿತ್ರ ಮುಫಾಸಾ: ದಿ ಲಯನ್ ಕಿಂಗ್‌ನಲ್ಲಿ ಮುಫಾಸಾ ಪಾತ್ರಕ್ಕೆ ಶಾರೂಖ್​​ ಖಾನ್​​ ಡಬ್ಬಿಂಗ್ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net