

ಮುಂಬೈ: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪ್ರಸ್ತುತ ಶಿಖರ್ ಪಹಾರಿಯಾ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿನ ಚರ್ಚೆಯ ಪ್ರಕಾರ ಈಗ ಜಾಹ್ನವಿ ಮತ್ತು ಶಿಖರ್ ನಡುವೆ ಸಂಬಂಧವಿರುವುದು ಖಚಿತವಾದಂತಾಗಿದೆ.
ಶಿಖರ್ ಇತ್ತೀಚೆಗೆ ಸ್ಟಾರ್ ಮಕ್ಕಳು ಮತ್ತು ದೊಡ್ಡ ತಾರೆಗಳೊಂದಿಗೆ ಕಾಣಿಸಿಕೊಂಡ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಜಾಹ್ನವಿ ಮಾಡಿರುವ ಕಾಮೆಂಟ್ ಮತ್ತು ಅದಕ್ಕೆ ಶಿಕರ್ ಪ್ರತಿಕ್ರಿಯಿಸಿರುವ ರೀತಿ ಗಮನಿಸಿದವರಿಗೆ "ಇಬ್ಬರ ನಡುವೆ ಖಂಡಿತವಾಗಿಯೂ ಏನೋ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿನ ಕಾಮೆಂಟ್ಗಳ ಪ್ರಕಾರ ಶಿಖರ್ ಈಗ ಜಾಹ್ನವಿಯನ್ನು ತನ್ನ ಗೆಳತಿ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾನೆ ಎಂದು ಅಭಿಮಾನಿಗಳು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಇವರಿಬ್ಬರು ಡೇಟಿಂಗ್ನಲ್ಲಿದ್ದಾರೆಂಬ ವದಂತಿಗಳ ನಡುವೆ ಶಿಖರ್ ಈಗ ಅಧಿಕೃತವಾಗಿ ಜಾಹ್ನವಿ ಜೊತೆಗಿನ ಸಂಬಂಧವನ್ನು ಘೋಷಿಸಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೊದಲ್ಲಿ ಶಿಖರ್ ಬೇರೊಂದು ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅವಳು ಗುಲಾಬಿ ಉಡುಗೆ ಧರಿಸಿದ್ದಾಳೆ. ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಜಾಹ್ನವಿ, ‘ಈ ಹುಡುಗಿ ಯಾರು?’ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಿರುವ ಶಿಖರ್ ‘ನಾನು ನಿಮ್ಮವನು ಮಾತ್ರ...’ ಎಂದು ಪ್ರತಿಕ್ರಿಯಿಸಿದ್ದಾನೆ. ಶಿಖರ್ನ ಈ ಕಾಮೆಂಟ್ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.
ಇನ್ನು ಜಾಹ್ನವಿ ಮುಂದಿನ ಸಿನಿಮಾಗಾಗಿ ದಕ್ಷಿಣದತ್ತ ಮುಖ ಮಾಡಿದ್ದಾರೆ. ದೇವರಾ ಅವರ ಈ ಚಿತ್ರದಲ್ಲಿ ಜಾಹ್ನವಿ ಅಭಿನಯಿಸಲಿದ್ದು, ಜೂ.ಎನ್ ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ, ಈ ನಟಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಯೋಜನೆಯ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.