72 ಗಂಟೆ ಕಾಯಿರಿ, ಎಲ್ಲ ಪ್ರಶ್ನೆಗೂ ಉತ್ತರ ಕೊಡ್ತೀನಿ… ಎನ್ನುತ್ತಲೇ ಮತ್ತಷ್ಟು ಕುತೂಹಲ ಮೂಡಿಸಿದ ಜನಾರ್ದನ ರೆಡ್ಡಿ!

State 2 Janardhan Reddy
Published on

ರಾಯಚೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸುತ್ತಿದ್ದು, ಶೀಘ್ರದಲ್ಲೇ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿದೆ. ಇದೀಗ ಎಲ್ಲದಕ್ಕೂ 72 ಗಂಟೆ ಕಾಲ ಕಾಯಿರಿ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ ಜನಾರ್ದನ ರೆಡ್ಡಿ.

ರಾಯಚೂರಿನ ಮಸ್ಕಿಯಲ್ಲಿ ಬುಧವಾರ ಮಾತನಾಡಿದ ಜನಾರ್ದನ ರೆಡ್ಡಿ, ಪ್ರಮುಖರನ್ನ ಭೇಟಿಯಾಗಲು ಮಸ್ಕಿಗೆ ಬಂದಿದ್ದೇನೆ. ಈ ಹಿಂದೆಯೂ ಸಾಕಷ್ಟು ಬಾರಿ ಕಾರ್ಯಕ್ರಮಕ್ಕೆ ಮಸ್ಕಿಗೆ ಬಂದಿದ್ದೇನೆ. ಈಗ ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ. ಡಿ.25ರಂದು ಎಲ್ಲವನ್ನೂ ಹೇಳುತ್ತೇನೆ. ನನ್ನ ಜೊತೆ ಯಾರು ಇರ್ತಾರೆ? ಯಾರು ಬರ್ತಾರೆ? ಅನ್ನೋದನ್ನ ಅಂದು ಹೇಳುತ್ತೇನೆ. ಎಲ್ಲಾ ಪ್ರಶ್ನೆಗಳಿಗೆ 25ನೇ ತಾರೀಖು ಉತ್ತರ ಸಿಗುತ್ತೆ. ಅಂದು ಶುಭ ದಿನ. ಇನ್ನು 72 ಗಂಟೆ ಕಾಯಿರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net