ಜನಾರ್ದನರೆಡ್ಡಿ ರಾಜಕೀಯದಲ್ಲಿ ಸಕ್ರಿಯ ಆಗುತ್ತಿದ್ದಂತೆ ಗಣಿ ಅಕ್ರಮ ಕೇಸ್‌ಗಳಿಗೆ ಸಿಕ್ಕಿತು ವೇಗ!

Reddy
Published on

ಬಳ್ಳಾರಿ: ಕಾಕತಾಳೀಯವೋ ಏನೋ... ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಮತ್ತೆ ಸಕ್ರಿಯ ಆಗುತ್ತಿದ್ದಂತೆ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ವೇಗ ಸಿಕ್ಕಿದಂತಾಗಿದೆ. ಸುಪ್ರಿಂ ಕೋರ್ಟ್​​ ಸೂಚನೆ ಮೇರೆಗೆ ಇಂದಿನಿಂದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ತ್ವರಿತ ವಿಚಾರಣೆ ನಡೆಸಲಿದೆ.

ಹೈದ್ರಾಬಾದ್​​ನಲ್ಲಿರುವ ಸಿಬಿಐ ವಿಶೇಷ ಕೋರ್ಟ್​ನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ‌ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸಾಕ್ಷಿ ಉದ್ಯಮಿ ಟಪಾಲ್ ಏಕಾಂಬರಂಗೆ ನ್ಯಾಯಾಲಯಕ್ಕೆ​​ಗೆ ಹಾಜರಾಗುವಂತೆ ಸಮನ್ಸ್​​ ನೀಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಸಾಕ್ಷಿಗಳಿದ್ದು, ನ್ಯಾಯಾಲಯ ಒಬ್ಬರ ನಂತರ ಒಬ್ಬರ ವಿಚಾರಣೆ ನಡೆಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ತಿಂಗಳಲ್ಲಿ ವಿಚಾರಣೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು. ಹೀಗಾಗಿ, ಇದೀಗ ​12 ವರ್ಷಗಳ ಹಿಂದಿನ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಮತ್ತೆ ವೇಗ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net