

ತಮಿಳುನಾಡು: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್' ಚಿತ್ರಕ್ಕೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಚಿತ್ರದ ಶೀರ್ಷಿಕೆಯಲ್ಲಿ ಗೊಂದಲ ಉಂಟಾಗಿದ್ದು, ಎರಡು ಸಿನಿಮಾಗಳು ಒಂದೇ ಟೈಟಲ್ ಅನ್ನು ಹೊಂದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.
ರಜನಿಕಾಂತ್ ಅವರ ನಟನೆಯ 'ಜೈಲರ್' ಚಿತ್ರವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಚಿತ್ರತಂಡ ಈಗಾಗಲೇ ಆಗಸ್ಟ್ 10, 2023 ರಂದು ಅದ್ಧೂರಿಯಾಗಿ ಬಿಡುಗಡೆಗೊಳಿಸಲಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಮಧ್ಯೆ ಇದೀಗ ಸಮಸ್ಯೆಯೊಂದು ಉದ್ಭವಗೊಂಡಿದ್ದು, ಮಲಯಾಳಂ ಚಿತ್ರತಂಡವೊಂದು ತಮ್ಮ ಚಿತ್ರಕ್ಕೂ ಕೂಡ ಜೈಲರ್ ಎಂದು ಟೈಟಲ್ ಇಟ್ಟುಕೊಂಡಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಧ್ಯಾನ್ ಶ್ರೀನಿವಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಲಯಾಳಂ ಚಿತ್ರವೂ ಜೈಲರ್ ಶೀರ್ಷಿಕೆಯನ್ನು ಹೊಂದಿದೆ. ಇತ್ತ ರಜನಿಕಾಂತ್ ನಟನೆಯ ಸಿನಿಮಾಗೂ ಜೈಲರ್ ಟೈಟಲ್ ಅನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಮಲಯಾಳಂ ನಿರ್ಮಾಪಕರು ಕಳವಳ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಕೇರಳದಲ್ಲಾದರೂ ಅದನ್ನು ಬದಲಾಯಿಸಲು ಟಾಲಿವುಡ್ನ ಜೈಲರ್ ತಂಡಕ್ಕೆ ನಿರ್ಮಾಪಕರು ಮನವಿ ಮಾಡಿದ್ದಾರೆ,(ಏಜೆನ್ಸೀಸ್).