More

    ಜೂ. ಎನ್​​ಟಿಆರ್ ‘ದೇವರ’​​ ಚಿತ್ರದಲ್ಲಿ ಅಲ್ಲು ಅರ್ಜುನ್​ ಪುತ್ರಿ?

    ಆಂಧ್ರಪ್ರದೇಶ: ​​ಟಾಲಿವುಡ್​​ ನಟ​​ ಜೂ. ಎನ್​​ಟಿಆರ್​ ಅವರ ಬಹುನಿರೀಕ್ಷಿತ ‘ದೇವರ’ ಚಿತ್ರದಲ್ಲಿ ಸ್ಟೈಲಿಶ್​​ ಸ್ಟಾರ್​ ಅಲ್ಲು ಅರ್ಜುನ್​​ ಪುತ್ರಿ ನಟಿಸಲಿದ್ದಾರೆ ಎಂಬ ವದಂತಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

    ಇದನ್ನೂ ಓದಿ: ಮಾದಕ ವ್ಯಸನದ ವಿಷ ವರ್ತುಲ ತಡೆಗೆ ಮಾಧ್ಯಮ ಹಾಗೂ ಆಡಳಿತ ಒಟ್ಟಾಗಿ ಕಾರ್ಯ ಮಾಡಬೇಕು

    ಜೂ. ಎನ್​​ಟಿಆರ್​​ ಅಭಿನಯಿಸುತ್ತಿರುವ ಪ್ಯಾನ್ ಇಂಡಿಯಾ ಮಾಸ್ ಎಂಟರ್​​ಟೈನರ್ ‘ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ನಾಯಕಿಯಾಗಿ ಬಾಲಿವುಡ್​​ ನಟಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರ ಬಳಗವೇ ಇದ್ದು, ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಆರ್ಹಾ ಪುಟ್ಟ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಸದ್ಯ ಸೋಷಿಯಲ್​ ಮೀಡಿಯಾವನ್ನು ಆವರಿಸಿಕೊಂಡಿದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಸಿನಿರಸಿಕರು ತೊಡಗಿದ್ದಾರೆ.

    ದೇವರ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್​​ ಅವರ ಮಗಳು ನಟಿಸಲಿದ್ದಾರೆ ಎಂದು ವದಂತಿಗಳು ಹೇಳಿವೆ. ಆದ್ರೆ, ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಕೂಡ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಮತ್ತು ಶೈನ್ ಟಾಮ್ ಚಾಕೊ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

    ಶಾರೂಖ್​​ ಖಾನ್​​ ‘ಪಠಾಣ್’ ಚಿತ್ರದ ಅಸಲಿ ಬಾಕ್ಸ್​​ ಆಫೀಸ್​ ಕಲೆಕ್ಷನ್​​ ಬಹಿರಂಗಪಡಿಸಲಿ: ನಟಿ ಕಾಜೋಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts