ಕೃಷಿಕರಿಗೆ ಜೈ ಕಿಸಾನ್ ಜಂಕ್ಷನ್

ವಿಜಯವಾಣಿ-3-4
Published on

ಬೆಂಗಳೂರು: ಹವಾಮಾನ ಬದಲಾವಣೆ, ಮಣ್ಣಿನ ಸವೆತ, ನೀರಿನ ಕೊರತೆ, ಉತ್ಪಾದನೆ ಕುಂಠಿತ, ಬೆಲೆ ಏರಿಳಿತ ಇತ್ಯಾದಿ...ಸಮಸ್ಯೆಗಳನ್ನು ಕೃಷಿಕರು ನಿರಂತರವಾಗಿ ಎದುರಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದಲ್ಲಾಗುತ್ತಿರುವ ತಂತ್ರಜ್ಞಾನ ಆಧಾರಿತ ಬದಲಾವಣೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡಬೇಕಾದ ಅವಶ್ಯಕತೆಯಿದೆ. ಕೃಷಿ ಕ್ಷೇತ್ರದ ಮೂಲಸಮಸ್ಯೆ ಗಳನ್ನು ನಿವಾರಿಸಲು ಜ್ಹುವಾರಿ ಫಾಮರ್್​ಹಬ್ ರೈತರಿಗೆ ನೆರವಾಗುತ್ತಿದೆ. ಹಲವು ಸವಾಲುಗಳ ನಡುವೆ ಸಿಲುಕಿರುವ ರೈತರಿಗೆ ಉತ್ಪಾದಕತೆ ಹಾಗೂ ಇಳುವರಿ ಹೆಚ್ಚಿಸುವ ಕ್ರಮಗಳ ಕುರಿತು ಪೂರಕ ಮಾಹಿತಿ ನೀಡುತ್ತಿದೆ.

ಜ್ಹುವಾರಿ ಫಾರ್ಮರ್ ​ಹಬ್ ಅತ್ಯಾಧುನಿಕವಾಗಿ ಉತ್ಪಾದನಾ ಸಾಮರ್ಥ್ಯ ಸೌಲಭ್ಯಗಳನ್ನು ಹೊಂದಿದ್ದು, ಗುಣಮಟ್ಟದ ಸಸ್ಯ ಪೋಷಕಾಂಶಗಳು ಹಾಗೂ ಬೆಳೆ ಆರೈಕೆ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, ರೈತರೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ. ಅಗತ್ಯ ಮಾಹಿತಿ ಪಡೆದುಕೊಂಡು, ರಸ ಗೊಬ್ಬರಗಳನ್ನು ತಯಾರಿಸುತ್ತಿದೆ.

ಜ್ಹುವಾರಿ ಫಾರ್ಮರ್​ ಹಬ್ ಉತ್ಪನ್ನಗಳು

  • ಮಣ್ಣಿನ ಗುಣವರ್ಧಕಗಳು ಸಾವಯವ ಉತ್ಪನ್ನಗಳು
  • ಲಘು ಪೋಷಕಾಂಶಗಳುದ್ರವರೂಪದ ಪೋಷಕಾಂಶಗಳು
  • ನೀರಿನಲ್ಲಿ ಕರಗುವ ರಸಗೊಬ್ಬರಗಳು ಕೀಟ, ಕಳೆನಾಶಕಗಳು

ಮುಂದಿನ ಯೋಜನೆ

ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಒಡಿಶಾ ಸೇರಿ 600ಕ್ಕೂ ಅಧಿಕ ಜೈ ಕಿಸಾನ್ ಜಂಕ್ಷನ್​ಗಳು ದೇಶದಲ್ಲಿವೆ. ಮುಂದಿನ 3 ವರ್ಷಗಳಲ್ಲಿ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆ ರೂಪಿಸಿದೆ.

ಕೃಷಿ ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಉತ್ಪನ್ನಗಳಿದ್ದು, ರೈತರು ಮೋಸ ಹೋಗುತ್ತಿದ್ದಾರೆ. ಜ್ಹುವಾರಿ ಫಾಮರ್್​ಹಬ್ ರೈತರಿಗೆ ಒಂದೇ ಸೂರಿನಡಿ ಗುಣಮಟ್ಟದ ವಸ್ತುಗಳು ಲಭ್ಯವಾಗುವಂತೆ ಜೈ ಕಿಸಾನ್ ಜಂಕ್ಷನ್ ಕೇಂದ್ರ ಸ್ಥಾಪಿಸಿದೆ.

| ಮದನ್ ಪಾಂಡೆ ವ್ಯವಸ್ಥಾಪಕ ನಿರ್ದೇಶಕ

ಸಹಾಯವಾಣಿ ಸಂಖ್ಯೆ

ಜ್ಹುವಾರಿ ಫಾರ್ಮರ್ ​ಹಬ್ ರೈತರಿಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಿದೆ. 1800 121 2333 ಸಂಖ್ಯೆಗೆ ಕರೆಮಾಡಿ ಅಗತ್ಯ ಕೃಷಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಇತರ ಮಳಿಗೆಗಳಲ್ಲೂ ಲಭ್ಯ

ರಸಗೊಬ್ಬರ, ಬೀಜಗಳು ಮತ್ತು ಕೀಟನಾಶಕಗಳಂತಹ ಕೃಷಿ ಅಗತ್ಯತೆಗಳನ್ನು ಜ್ಹುವಾರಿ ಫಾಮರ್್​ಹಬ್, ಜೈ ಕಿಸಾನ್ ಜಂಕ್ಷನ್ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿದೆ. ಗುಣಮಟ್ಟದ ಉತ್ಪನ್ನಗಳನ್ನು ನ್ಯಾಯಯುತ ಬೆಲೆಯಲ್ಲಿ ರೈತರಿಗೆ ನೀಡುತ್ತಿದೆ. ಈ ಉತ್ಪನ್ನಗಳು ಇತರ ಕೃಷಿ ವಿತರಕ ಮಳಿಗೆಗಳಲ್ಲೂ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net