ಮುಂದಿನ US​ ಅಧ್ಯಕ್ಷರು ಇವರೇ.. ಬೈಡನ್​ ಭವಿಷ್ಯ ನುಡಿದಿದ್ದ ಜ್ಯೋತಿಷಿಯಿಂದ ಹೊರಬಿತ್ತು ಶಾಕಿಂಗ್ ಹೆಸರು!

ವಿಜಯವಾಣಿ - 2024-07-28T221055.459
Published on

ವಾಷಿಂಗ್ಟನ್: ಇತ್ತೀಚೆಗಷ್ಟೇ ಡೆಮಾಕ್ರಟಿಕ್ ನಾಯಕರ ತೀವ್ರ ಒತ್ತಡದ ಬೆನ್ನಲ್ಲೇ ಅಧ್ಯಕ್ಷೀಯ ಚುನಾವಣಾ ರೇಸ್​ನಿಂದ ಅಮೆರಿಕಾ ಪ್ರೆಸಿಡೆಂಟ್​ ಜೋ ಬೈಡನ್ ಹಿಂದೆ ಸರಿದಿದ್ದರು. ತಮ್ಮ ಅಧ್ಯಕ್ಷೀಯ ಮರುಚುನಾವಣೆಯ ಪ್ರಚಾರವನ್ನು ಕೊನೆಗೊಳಿಸುವುದಾಗಿ ಜು.21ರಂದು ಬೈಡನ್ ಅಧಿಕೃತವಾಗಿ​ ಘೋಷಿಸಿದರು. ಎಲೆಕ್ಷನ್​ಗೆ ಕೇವಲ ನಾಲ್ಕು ತಿಂಗಳ ಮೊದಲೇ ಶ್ವೇತಭವನದ ಓಟದಿಂದ ಜೋ ಬೈಡನ್​ ದಿಢೀರ್​ ಹಿಂದೆ ಸರಿದಿರುವುದು ಅನೇಕರಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿತು. ಈ ಕುರಿತು ಈ ಹಿಂದೆಯೇ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿಯ ಮಾತು ಇಂದು ಸತ್ಯವಾಗಿದೆ. ಇದೀಗ ಅವರೇ ಮತ್ತೊಂದು ಶಾಕಿಂಗ್ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ರೇಸ್​ನಿಂದ ಹಿಂದೆ ಉಳಿಯುವುದಾಗಿ ಸ್ವತಃ ಬೈಡನ್ ಅವರೇ ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ದೇಶದ ಹಾಲಿ ಅಧ್ಯಕ್ಷರೂ ಆಗಿರುವ ಬೈಡೆನ್ ಇದೇ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿದ್ದರು. ಅವರಿಗೆ 81 ವರ್ಷ ವಯಸ್ಸಾಗಿದ್ದು, ಚುನಾವಣೆ ಸಂಬಂಧದ ಬಹಿರಂಗ ಸಭೆಗಳಲ್ಲಿಯೇ ಅವರ ಮರೆಗುಳಿತನದ ಘಟನೆಗಳು ಸಂಭವಿಸಿ ಜಗತ್ತಿನಾದ್ಯಂತ ಚರ್ಚೆಗೀಡಾಗಿದ್ದವು. ಇದರಿಂದಾಗಿ ಸ್ವಪಕ್ಷೀಯರೇ ಅವರ ಉಮೇದುವಾರಿಕೆಯನ್ನು ವಿರೋಧಿಸತೊಡಗಿದ್ದರು.

ಜೋ ಬಿಡೆನ್ ಮರುಚುನಾವಣೆಯ ಪ್ರಚಾರ ಕೈಬಿಡುವ ಬಗ್ಗೆ ಸರಿಯಾಗಿ ಊಹಿಸಿದ್ದ ಜ್ಯೋತಿಷಿಯೊಬ್ಬರು ಇದೀಗ ಮುಂದಿನ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರು ಯಾರು ಎಂಬುದನ್ನು ಕೂಡ ನಿಖರವಾಗಿ ತಿಳಿಸಿದ್ದಾರೆ. ಪ್ರಸ್ತುತ ಇಂಟರ್ನೆಟ್‌ನ ಅತ್ಯಂತ ಕುಖ್ಯಾತ ಜ್ಯೋತಿಷಿ ಎಂದು ಕರೆಯಲ್ಪಡುವ ಆಮಿ ಟ್ರಿಪ್, ನಕ್ಷತ್ರಗಳ ಪ್ರಕಾರ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಿರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಮಿಸ್ಟರ್​ ಟ್ರಂಪ್​ ತಮ್ಮ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ಸದ್ಯ ಅವರು ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಟ್ರಂಪ್​ ಮುಂದಿನ ಅಮೆರಿಕಾದ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net