ಅಸೆಂಬ್ಲಿ ಟಿಕೆಟ್ ಕೊಟ್ಟಿಲ್ಲ ಎಂದು ಬಿಜೆಪಿ ಬಿಟ್ರು! ಮತ್ತೆ ಅಲ್ಲಿಯೂ ಖಾಯಂ ಇರ್ತಾರೆ ಅಂತ ಯಾವ ಗ್ಯಾರಂಟಿ?

ವಿಜಯವಾಣಿ - 2024-01-25T142749.613
Published on

ತುಮಕೂರು: ಜಗದೀಶ್ ಶೆಟ್ಟರ್ ಘರ್ ವಾಪ್ಸಿ ವಿಚಾರ ಕುರಿತು ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ಮಾತನಾಡಿದ್ದು, ಜಗದೀಶ್ ಶೆಟ್ಟರ್ ಬಿಜೆಪಿ ವಾಪಸ್ ಹೋಗಿದ್ದಾರೆ ಅನ್ನೋದನ್ನ ಮಾದ್ಯಮದಲ್ಲಿ ನೋಡಿದೆ. ಅವರ ನಡೆ ನೋಡಿದಾಗ ನ್ಯೂಟನ್ ನಿಯಮ ನೆನೆಪಿಗೆ ಬಂತು, ಆ ನಿಯಮ ಜಗದೀಶ್​ಗೆ ಅನ್ವಯಿಸುತ್ತದೆ. ಶೆಟ್ಟರ್ ಸಂಭಾವಿತ ವ್ಯಕ್ತಿ, ಅವರು ವಾಪಾಸ್ ಹೋಗಿರೋದ್ರಿಂದ ಬಿಜೆಪಿಗೆ ಲಾಭ ಆಯ್ತು. ಶೆಟ್ಟರ್ ಅವರಿಗೆ ಅವಮಾನ ಆಯ್ತು, ಈಗ ಅವರು ಅಲ್ಲಿಯೇ ಖಾಯಂ ಆಗಿ ಇರ್ತಾರೆ ಅಂತ ಯಾವ ಗ್ಯಾರಂಟಿ? ಎಂದಿದ್ದಾರೆ.

"ಒಂದು ಅಸೆಂಬ್ಲಿ ಟಿಕೆಟ್ ಕೊಟ್ಟಿಲ್ಲ ಅಂತಾ ಪಕ್ಷ ಬಿಟ್ರು, ತತ್ವ ಸಿದ್ಧಾಂತದ ಆಧಾರದ ಮೇಲೆ ಅವರು ಪಕ್ಷ ಬಿಟ್ಟಿದ್ದಿದ್ರೆ ನಾನು ಒಪ್ಪುತ್ತಿದ್ದೆ. ಈಗಲೂ ಕೂಡ ಕಾಂಗ್ರೆಸ್​ನ ತತ್ವ ಸಿದ್ಧಾಂತಗಳು ಸರಿಯಿಲ್ಲ. ಹೀಗಾಗಿ ಬಿಜೆಪಿಗೆ ಹೋಗಿದ್ದೇನೆ ಅಂತಾ ಹೇಳಿದ್ರೆ ನಾನು ಒಪ್ಪುತ್ತೇನೆ. ಅವರ ಸ್ವಾರ್ಥಕ್ಕೋಸ್ಕರ ಪಕ್ಷ ಬದಲಾಯಿಸಿದ್ದಾರೆ. ಅವರನ್ನ ಪಕ್ಷ ಈಗಾಗಲೇ ಪರಿಷತ್ ಸದಸ್ಯನಾಗಿ ಮಾಡಿತ್ತು, ಸಚಿವ ಸಂಪುಟ ಪುನರಚನೆ ವೇಳೆ ಸಚಿವ ಸ್ಥಾನ ಕೂಡ ಕೊಡ್ತಿದ್ರು, ಅವರು ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿ ಅಲ್ಲ" ಎಂದರು.

"ಅವರು ಮುಖ್ಯಮಂತ್ರಿ ಆಗಿದ್ದೋರು, ಅವರಿಗೆ ಸಮಾಜದಲ್ಲಿ ಗೌರವವಿದೆ. ಇಂತಹ ಗೌರವ ಇರುವ ವ್ಯಕ್ತಿ ವೈಯಕ್ತಿಕ ಹಿತಾಸಕ್ತಿಗೋಸ್ಕರ ಪಕ್ಷಾಂತರ ಮಾಡಿದ್ದು ಒಪ್ಪುವಂತದ್ದಲ್ಲ. ಲೋಕಸಭಾ ಟಿಕೆಟ್ ಕೊಡೋರು, ಅವರಿಗೆ ಇಲ್ಲ ಅನ್ನುತ್ತಿರಲಿಲ್ಲ. ಐಟಿ-ಇಡಿ ಬೆದರಿಕೆ ಹುಟ್ಟಿಸಿದ್ದಾರೆ ಅನ್ನೋ ಬಗ್ಗೆ ಗೊತ್ತಿಲ್ಲ. ಬಿಜೆಪಿ ಯಾವಾಗಲೂ ಸೆಂಟ್ರಲ್ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಂಡು ಬಂದಿದೆ" ಎಂದು ತಿಳಿಸಿದರು.

"ಮಾಯಾವತಿಯವರನ್ನು ಕೂಡ ಬಿಜೆಪಿ ಹೀಗೆಯೇ ಹೆದರಿಸಿತ್ತು. ಶೆಟ್ಟರ್ ವಿಚಾರದಲ್ಲಿ ಏನಾಗಿದೆ ಅನ್ನೋದು ಗೊತ್ತಿಲ್ಲ. ನಾನು ಶೆಟ್ಟರ್ ಪಕ್ಷ ತೊರೆಯುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ತರಾತುರಿಯಲ್ಲಿ ಪಕ್ಷ ತೊರೆದಿರುವುದರ ಹಿಂದೆ ಏನೋ ನಡೆದಿದೆ. ಶೆಟ್ಟರ್ ಹೋಗಿರೋದ್ರಿಂದ ಕಾಂಗ್ರೆಸ್​ಗೆ ನಷ್ಟ ಅನ್ನೋ ಪ್ರಮೇಯವಿಲ್ಲ. ಬಿಜೆಪಿಯಲ್ಲಿರುವ ಶೆಟ್ಟರ್ ವಿರೋಧಿಗಳು ಈಗ ಕಾಂಗ್ರೆಸ್​ಗೆ ಬರ್ತಾರೆ" ಎಂದರು.

"ಆದರೆ ಶೆಟ್ಟರ್ ವಾಪಸ್ ಹೋಗಿದ್ದರಿಂದ ಅವರ ಗೌರವ ಕಡಿಮೆಯಾಗಿದೆ. ಸವದಿಯವರು ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು. ಅವರು ನನ್ನ ಒಳ್ಳೆಯ ಸ್ನೇಹಿತ. ಅವರಿಗೆ ಈಗಷ್ಟೆ ಕರೆ ಮಾಡಿದ್ದೇನೆ. ಅವರು ರಿಸೀವ್ ಮಾಡಿಲ್ಲ, ಮತ್ತೆ ವಾಪಾಸ್ ಕರೆ ಮಾಡಬಹುದು" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net