BBKS10: ಈ ಮನೆಯಲ್ಲಿ ತಲೆನೋವು ಯಾರು? ಇವರ ಹೆಸರೇ ಮೊದಲು!

ವಿಜಯವಾಣಿ - 2024-01-25T135141.484
Published on

ಬೆಂಗಳೂರು: ಬಿಗ್ ಬಾಸ್ ಸೀಸನ್​ 10ರ ಸ್ಪರ್ಧಿಗಳು ಇದೀಗ ಫಿನಾಲೆ ವಾರವನ್ನು ತಲುಪಿದ್ದು, ಸದ್ಯ ಟ್ರೋಫಿಗಾಗಿ ಸಖತ್ ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಈ ನಡುವೆ ಮನೆಯೊಳಗೆ ಟಾಸ್ಕ್​ ಹಾಗೂ ಸದಸ್ಯರ ಮಧ್ಯೆ ಯಾವುದೇ ರೀತಿಯ ವಾಗ್ವಾದ ಅಷ್ಟಾಗಿ ಕೇಳಿಬಂದಿಲ್ಲ. ಆದ್ರೆ, ನಿನ್ನೆಯ ಸಂಚಿಕೆಯಲ್ಲಿ ಕೋಪ, ಆತ್ಮವಿಮರ್ಶೆ ನಂತರ ತನ್ನ ಸಹಸ್ಪರ್ಧಿಗಳ ಜತೆ ಮನಬಿಚ್ಚಿ ಮಾತಾಡಿ ಹಗುರಾಗಿ ಚುಟುವಟಿಕೆಯ ಬೆನ್ನಲ್ಲೇ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಕೊಟ್ಟಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ರೇಡಿಯೊ ಸ್ಟೇಷನ್ ಸ್ಥಾಪಿತವಾಗಿದೆ. ಸ್ಟೇಷನ್‌ ಇಲ್ಲದೆಯೂ ರೇಡಿಯೊದ ಕೆಲಸ ಮಾಡುತ್ತಿದ್ದ ತುಕಾಲಿ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ? ’ಹಾಯ್ ಅಲೋ ನಮಸ್ಕಾರ’ ಎಂದು ಶುರುಮಾಡಿ, ಮೊದಲು ಮಾತಾಡಿಸಿದ್ದು ವರ್ತೂರು ಸಂತೋಷ್ ಅವರನ್ನೇ. ಇದಕ್ಕೆ ಸಂಗೀತಾ ಹುಸಿಮುನಿಸಿನಿಂದ, ‘ಬರೀ ಅವ್ರನ್ನೇ ಮಾತಾಡಿಸ್ಬೇಕಾ?’ ಎಂದು ಗಾಳಿಯಲ್ಲಿ ಗುದ್ದಿದ್ದಾರೆ.

ಅಷ್ಟೇ ಅಲ್ಲ, ಕಾರ್ತಿಕ್ ಅವರಿಗೆ, ‘ಈ ಮನೆಯಲ್ಲಿ ತಲೆನೋವು ಎಂಬ ಪದಕವನ್ನು ಯಾರಿಗೆ ಕೊಡಲು ಬಯಸುತ್ತೀರಾ?’ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್, ‘ಸಂಗೀತಾ’ ಎಂದು ಹೇಳಿದ್ದಾರೆ. ಅದಕ್ಕೆ ಸಂಗೀತಾ ಮುಖದಲ್ಲಿ ಅಸಮಾಧಾನದ ಗೆರೆಗಳು ಕಾಣಿಸಿಕೊಂಡಿವೆ. ಕಾರ್ತಿಕ್ ಅವರ ಉತ್ತರ ಕೇಳಿ ತುಕಾಲಿ ಅವರು, ‘ಈ ಸಂದರ್ಭದಲ್ಲಿ ನನಗೊಂದು ಹಾಡು ನೆನಪಾಗ್ತಿದೆ’ ಎಂದು ಹೇಳಿ ‘ಏನೋ ಮಾಡಲು ಹೋಗಿ… ಏನು ಮಾಡಿದೆ ನೀನು…’ ಎಂದು ಹಾಡಿ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಕಾರ್ತಿಕ್ ಮಾತು ಕೇಳಿ ಸಂಗೀತಾ ನಿಜಕ್ಕೂ ಮುನಿಸಿಕೊಂಡರಾ? ರೆಡಿಯೊ ಜಾಕಿಯಾಗಿ ಇದಕ್ಕೆ ಉತ್ತರ ಕೊಡ್ತಾರಾ? ಈ ಎಲ್ಲ ಪ್ರಶ್ನೆಗಳಿಗೂ ಇಂದಿನ ಸಂಚಿಕಯಲ್ಲಿ ಉತ್ತರ ಸಿಗಲಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net