

ನವದೆಹಲಿ: ಪಂಜಾಬ್‌ನ ಬಟಿಂಡಾದಲ್ಲಿ ಕೋಳಿಗೆ ದಿನದ 24 ಗಂಟೆಯೂ ಭದ್ರತೆ ನೀಡಲಾಗುತ್ತಿದೆ. ಪ್ರತಿ ದಿನ ಕೋಳಿಯ್ನು ಆರೈಕೆ ಮಾಡುತ್ತಾ, ಶಿಫ್ಟ್ ರೀತಿಯಲ್ಲಿ ದಿನದ 24 ಗಂಟೆ ಸೂಕ್ತ ಭದ್ರತೆ ನೀಡಲಾಗುತ್ತಿದೆ.
ಪೊಲೀಸ್ ಅಧಿಕಾರಿ ನಿರ್ಮಲ್ ಸಿಂಗ್ ಮಾತನಾಡಿ, ಬಟಿಂಡಾದ ಬಲ್ಲುವಾನ ಗ್ರಾಮದಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಕೋಳಿ ಓಟದ ವೇಳೆ ಸುಮಾರು 200 ಮಂದಿ ಹಾಜರಿದ್ದರು. ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದೆವು ಆದರೆ ಅವರು ಹೋಗುವುದನ್ನು ನೋಡಿದವರೆಲ್ಲರೂ ಓಡಿಹೋದರು . ಆದರೆ ಎರಡು ಕೋಳಿ ಮತ್ತು ಒಬ್ಬ ವ್ಯಕ್ತಿ ಸಿಕ್ಕಿ ಬಿದ್ದಿದ್ದಾರೆ. ಗಾಯಗೊಂಡ ಕೋಳಿಗೆ ಭದ್ರತೆ ಒದಗಿಸುವ ಜತೆಗೆ ವೈದ್ಯಕೀಯ, ಆಹಾರದ ನೆರವು ನೀಡಲಾಗುತ್ತಿದೆ. ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 11 ಟ್ರೋಫಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಕ್ಷಿ-ಪ್ರಾಣಿ ಹಿಂಸೆ ವಿರುದ್ಧ ಅನೇಕ ಕಾನೂನು ಕ್ರಮಗಳಿವೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ರಾಜ್ವಿಂದರ್ ನನ್ನು ಬಂಧಿಸಲಾಗಿದೆ. ಆದರೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ಇತರ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ಪ್ರಕರಣದ ಸಂತ್ರಸ್ತೆ ಕೋಳಿಯನ್ನೂ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಒಪ್ಪಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನು ಸೇರಿಸಲು ನ್ಯಾಯಾಲಯವು ಕೇಳಿದಾಗ, ನಾವು ಈ ಕೋಳಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ನಿರ್ಮಲ್ ಸಿಂಗ್ ಹೇಳಿದರು. ಅಲ್ಲಿಯವರೆಗೂ ಈ ಕೋಳಿಯನ್ನು ಸ್ವಂತ ಮಗುವಿನಂತೆ ಬಹಳ ಎಚ್ಚರಿಕೆಯಿಂದ ಪರಿಗಣಿಸಬೇಕು. ಅಂಕದ ಕೋಳಿಗೆ ಪಂಜಾಬ್‌ನಲ್ಲಿ ಬಾರಿ ಬೇಡಿಕೆ ಇದೆ. ಹೀಗಾಗಿ ರಾತ್ರಿ ವೇಳೆ ಅಥವಾ ಪೊಲೀಸರ ಕಣ್ತಪ್ಪಿಸಿ ಕೋಳಿಯನ್ನು ಅಪಹರಿಸುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ಭದ್ರತೆ ನೀಡಲಾಗುತ್ತಿದೆ. ಆದರೆ, ಪೊಲೀಸ್ ಠಾಣೆಯಲ್ಲಿ ಕೋಳಿ ಇಟ್ಟರೆ ಒಂಟಿಯಾಗಬಹುದು ಎಂದು ಭಾವಿಸಿದ ಪೊಲೀಸರು ಕೋಳಿ ಸಾಕಾಣಿಕೆಗೆ ಕೇರ್ ಟೇಕರ್ ಅವರನ್ನು ನಿಯೋಜಿಸಿದ್ದರು. ಆದರೂ ಕೋಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಖುದ್ದು ಭೇಟಿ ನೀಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.