ಸೆಕ್ಸ್​ ವಿಚಾರದಲ್ಲಿ 10 ವರ್ಷದಿಂದ ಪತಿಗೆ ಸುಳ್ಳು ಹೇಳಿದ್ದೇನೆ, ಸತ್ಯ ತಿಳಿಸೋದು ಹೇಗೆಂದ ಮಹಿಳೆ!

Woman
Published on

ಸಂಬಂಧ ಮತ್ತು ಜೀವನ ಅಂತ ಬಂದಾಗ ಸಾಮಾನ್ಯವಾ ಒಂದು ವಿಚಾರವಂತೂ ನಿಜವಾಗಿಯೂ ತಿಳಿದಿರಬೇಕು. ಪ್ರಾಮಾಣಿಕತೆಯೇ ಯಾವಾಗಲೂ ಅತ್ಯುತ್ತಮ ನೀತಿಯಾಗಿರುತ್ತದೆ ಎಂಬುದನ್ನು ಅರಿತಿರಬೇಕು.

ಆದರೆ, ಇದಕ್ಕೆ ವಿರುದ್ಧವಾದ ಮಹಿಳೆಯೊಬ್ಬಳು ಸೆಕ್ಸ್​ ವಿಚಾರದಲ್ಲಿ ಸುಮಾರು 10 ವರ್ಷದಿಂದ ತನ್ನ ಪತಿಗೆ ಸುಳ್ಳು ಹೇಳಿಕೊಂಡು ಬಂದಿದ್ದೇನೆಂದು ಒಪ್ಪಿಕೊಂಡಿದ್ದಾಳೆ. ಹೆಸರು ಉಲ್ಲೇಖಿಸದ ಮಹಿಳೆಯೊಬ್ಬಳು ತನ್ನ ಪತಿ ಪತಿಗೆ ಸತ್ಯ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆಂಬ ಯೋಚನೆಯಲ್ಲಿದ್ದು, ಸತ್ಯವನ್ನು ಪತಿಗೆ ಹೇಗೆ ತಿಳಿಸಬೇಕೆಂಬ ಗೊಂದಲದಲ್ಲಿಯೂ ಇದ್ದಾಳೆ.

ಹೀಗಾಗಿಯೇ ಆಕೆ ತಜ್ಞರ ಮೊರೆ ಹೋಗಿದ್ದು, ನ್ಯೂಸ್​. ಕಾಮ್​. ಎಯು (news.com.au) ನ ರಿಲೆಷನ್​ಶಿಪ್​ ರೆಹಾಬ್ ಅಂಕಣದಲ್ಲಿ ಮಹಿಳೆ ಎಲ್ಲವನ್ನು ವಿವರಿಸಿದ್ದು, ಮದುವೆಯಾದಾಗಿನಿಂದ ತನ್ನ ಪತಿಗೆ ಸೆಕ್ಸ್​ ವಿಚಾರದಲ್ಲಿ ಮೋಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ​

ನಾನು ಕಳೆದ 10 ವರ್ಷಗಳಿಂದ ನನ್ನ ಪತಿಯೊಂದಿಗೆ ಇದ್ದೇನೆ. ಅವರನ್ನು ತುಂಬಾ ಪ್ರೀತಿಯನ್ನು ಮಾಡುತ್ತೇನೆ. ಇಬ್ಬರು ಲೈಂಗಿಕ ಜೀವನವನ್ನು ತುಂಬಾ ಎಂಜಾಯ್​ ಮಾಡುತ್ತೇವೆ. ಆದರೆ ಒಂದು ಸಮಸ್ಯೆ ಇದೆ. ನಾನೆಂದಿಗೂ ಪತಿಯೊಂದಿಗೆ ಆರ್ಗ್ಯಾಸಮ್​ (ಸಂಭೋಗೋದ್ರೇಕದ ಪರಾಕಾಷ್ಠೆ) ನಲ್ಲಿ ತೊಡಗಿಲ್ಲ ಎಂದಿದ್ದಾಳೆ.

ಈ ವಿಚಾರದಲ್ಲಿ 10 ವರ್ಷದಿಂದಲೂ ಪತಿಗೆ ಮೋಸ ಮಾಡಿದ್ದೇನೆ. ಇದೀಗ ನಾನೇನು ಮಾಡಬೇಕೆಂದು ಏನು ಮಾಡಬೇಕೆಂದು ನನಗೆ ದೋಚುತ್ತಿಲ್ಲ. ಈ ಹಿಂದಿನ ಬಾಯ್​ಫ್ರೆಂಡ್​ ಜತೆಯಲ್ಲಿ ನಾನು ಆರ್ಗ್ಯಾಸಮ್​ನಲ್ಲಿ ತೊಡಗಿದ್ದೆ. ಆದರೆ, ನನ್ನ ಸ್ವಂತ ಪತಿಗಾಗಿ ಇದರಲ್ಲಿ ತೊಡಗಿಲ್ಲ. ಇದು ನನ್ನನ್ನು ಕಾಡುತ್ತಿದೆ ಎಂದಿದ್ದಾಳೆ.

ಆರಂಭದಲ್ಲಿ ಈ ವಿಚಾರದಲ್ಲಿ ಸುಳ್ಳು ಹೇಳಿದ ಮಹಿಳೆ ಮುಂದೆ ಅದಾಗಿಯೇ ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಿದ್ದರಂತೆ. ಆದರೆ, ಆ ಕ್ಷಣ ಈವರೆಗೂ ಬರಲಿಲ್ಲ ಎನ್ನುತ್ತಾರೆ. ಒಂದು ವೇಳೆ ಸತ್ಯವನ್ನು ಹೇಳಿದರೆ ನನ್ನ ಲೈಂಗಿಕ ಜೀವನವನ್ನು ಮರಳಿ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಾನವ ಸಂಬಂಧ ತಜ್ಞೆ ಇಸಿಯಾ ಮೆಕಿಮ್ಮಿ ಕೆಲವು ಭರವಸೆಗಳನ್ನು ಮಹಿಳೆಗೆ ನೀಡಿದ್ದಾರೆ. ನಿಮ್ಮಿಬ್ಬರ ನಡುವಿನ ಸಂವಹನವನ್ನು ಉತ್ತಮ ಪಡಿಸಿಕೊಳ್ಳಿ. ಸೆಕ್ಸ್​ಗೂ ಮುನ್ನ ನಿಮಗೆ ಏನು ಬೇಕೋ ಅದರ ಬಗ್ಗೆ ಹೆಚ್ಚು ಮಾತನಾಡಿ ಮತ್ತು ನಿಮ್ಮ ದೇಹವನ್ನು ಲೈಂಗಿಕ ಕ್ರಿಯೆ ರೆಡಿಯಾಗಿ. ನೀವು ಮಾನಸಿಕವಾಗಿ ಸಿದ್ಧರಾಗಿ ಒಮ್ಮೆ ಲೈಂಗಿಕ ಚಿಕಿತ್ಸಕರೊಂದಿಗೆ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.

ಸತ್ಯ ಹೇಳಿದರೆ ಏನಾಗುತ್ತದೆಯೋ ಎಂಬುದರ ಬಗ್ಗೆ ಭರವಸೆಯನ್ನು ಕಳೆದುಕೊಳ್ಳಬೇಡಿ. ಅನೇಕ ಮಂದಿ ನಮ್ಮಿಂದ ಸಾಧ್ಯವಾಗುವುದಿಲ್ಲ ಅಂದುಕೊಂಡರು ತಮ್ಮ ಸೆಕ್ಸ್​ ಜೀವನವನ್ನು ಮರಳಿ ಪಡೆದುಕೊಂಡಿದ್ದನ್ನು ನಾನು ಗಮನಿಸಿದ್ದೇನೆ. ಧನಾತ್ಮಕವಾಗಿರಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net