"ನನಗೆ ಲಾಕ್​ಡೌನ್​ ಆಗಿದೆ, ನಿಮಗೆ ನೈಟ್ ಕರ್ಫ್ಯೂ ಆದ್ರೂ ಇರಲಿ!"

aryan
Published on

ಮುಂಬೈ : ಈ ವಾರದ ಆರಂಭದಲ್ಲಿ ನಟ ಕಾರ್ತಿಕ್ ಆರ್ಯನ್ ತಮಗೆ ಕರೊನಾ ಪಾಸಿಟೀವ್ ಬಂದಿರುವ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದರು. ಆಗಿನಿಂದ ಕ್ವಾರಂಟೈನ್​ನಲ್ಲಿರುವ ಈ 30 ವರ್ಷದ ಯುವ ನಟ, ಇದೀಗ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ಫನ್ನಿ ಕಾಮೆಂಟ್ ಪೋಸ್ಟ್​ ಮಾಡಿದ್ದಾರೆ.

ತಮ್ಮ ವಿಶಿಷ್ಟ ಶೈಲಿಯಲ್ಲಿ ಪೋಸ್ ಮಾಡುತ್ತಾ, ಮುಂಬೈ ನಿವಾಸಿಯಾದ ಆರ್ಯನ್​ ತಮ್ಮ ಕ್ವಾರಂಟೈನ್ ಬಗ್ಗೆ ಮಾತನಾಡಿದ್ದಾರೆ. "ನನಗೆ ಲಾಕ್​ಡೌನ್ ಆಗಿಬಿಟ್ಟಿದೆ. ನಿಮಗೆಲ್ಲಾ ನೈಟ್ ಕರ್ಫ್ಯೂನಾದ್ರೂ ಆಗಲಿ" ಎಂದು ಕಾಮೆಂಟ್ ಮಾಡಿದ್ದಾರೆ! ಜೊತೆಗೆ ತಮ್ಮ ಫೋಟೋಗೆ 'ಕೋವಿಡ್ ಸೆಲ್ಫಿ' ಎಂದು ಹೆಸರಿಟ್ಟು, ಬಿಸಿಲು ಬೀಳುತ್ತಿರುವ ತಮ್ಮ ಮುಖದ 'ಹೊಳೆಯುತ್ತಿರುವ ತ್ವಚೆ' ನೋಡಿ ಎಂದಿದ್ದಾರೆ.

ಅವರ ಅಭಿಮಾನಿಗಳೂ ಇದನ್ನು ಜಾಲಿಯಾಗಿ ತೊಗೊಂಡು ಮೆಚ್ಚುಗೆ ಸೂಚಿಸಿದ್ದಾರೆ. ಅವರ ಈ ಪೋಸ್ಟ್ 6 ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ.

ಸುಮಾರು 37,000 ಹೊಸ ಕರೊನಾ ಪ್ರಕರಣಗಳನ್ನು ದಾಖಲಿಸಿರುವ ಮಹಾರಾಷ್ಟ್ರ, ದೇಶದಲ್ಲೇ ಅತ್ಯಂತ ಗಂಭೀರ ಸ್ಥಿತಿ ಹೊಂದಿದೆ. ಕರೊನಾ ಹರಡುವಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯ ಸರ್ಕಾರ, ಮಾರ್ಚ್ 28 ರಿಂದ ರಾತ್ರಿ ಕರ್ಫ್ಯೂ ಘೋಷಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net