ಗೌರಮ್ಮನ ದೇಗುಲದಲ್ಲಿ ಇಷ್ಟಲಿಂಗ ಪೂಜೆ

8 ald 1
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡುತ್ತಿರುವುದು.
Published on

ಆಲ್ದೂರು: ಮುಗಳವಳ್ಳಿ ಗ್ರಾಮದ ಗೌರಮ್ಮನ ದೇವಸ್ಥಾನದಲ್ಲಿ ಭಾನುವಾರ ಮರ್ಲೆ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಇಷ್ಟಲಿಂಗ ಮಹಾಪೂಜೆ ನೆರವೇರಿತು.

ದೇವಸ್ಥಾನದಲ್ಲಿ ಪ್ರತಿ ವರ್ಷ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಒಂದು ತಿಂಗಳ ಕಾಲ ಪೂಜಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಇಷ್ಟಲಿಂಗ ಪೂಜೆ ಜರುಗಿತು. ಇಡೀ ದೇಶ ಮಳೆ, ಬೆಳೆಗಳಿಂದ ಸುಭಿಕ್ಷೆ ಹೊಂದಿ, ಸುಖ, ಸಂತೋಷ, ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಲಾಯಿತು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮುತ್ತೈದೆಯರಿಗೆ ಮಡಿಲಕ್ಕಿ ತಾಂಬೂಲ ನೀಡಿ ಆಶೀರ್ವದಿಸಲಾಯಿತು. ಶ್ರೀ ದೇವಿ ಗುರುಕುಲದ ಡಾ. ದಯಾನಂದ ಶಾಸಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ಜರುಗಿತು. ಪೂಜೆ ನಂತರ ಪ್ರಸಾದ ವಿನಿಯೋಗ, ಗೌರಮ್ಮ ದೇವಿಗೆ ಮಂಗಳಾರತಿ ಮಾಡಲಾಯಿತು.
ಅ.18ರಂದು ರಾತ್ರಿ ವಿಜೃಂಭಣೆಯಿಂದ ಜಾತ್ರೆ ನಡೆದು 19ರಂದು ಬೆಳಗ್ಗೆ ದೇವಿಕೆರೆಯಲ್ಲಿ ಗೌರಿಯನ್ನು ವಿಸರ್ಜಿಸಲಾಗುತ್ತದೆ. ಇದೇ ದಿನ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಯನ್ನು ಜಲಸ್ತಂಭನ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net