

ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಿದ್ಧತೆ, ಸ್ಪೇಸ್ ಅಭಿವೃದ್ಧಿ ಪಡಿಸಿರುವ ಪ್ರೋಬಾ-3 ನಾಳೆ ಇಸ್ರೋದಿಂದ ಉಡಾವಣೆ: ಗಿರೀಶ್ ಲಿಂಗಣ್ಣ
ಯುರೋಪಿಯನ್ ಸ್ಪೇಷ್ ಏಜೆನ್ಸಿ ಅಭಿವೃದ್ಧಿಪಡಿಸಿರುವ ಪ್ರೊಬಾ-3 ಅನ್ನು (ಪ್ರಾಜೆಕ್ಟ್ ಆನ್‌ಬೋರ್ಡ್ ಅನಾಟಮಿ) ಡಿ.4ರ ಸಂಜೆ 4:08 ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಪಿಎಸ್ಎಲ್‌ವಿ-ಸಿ 59 ರಾಕೆಟ್ ಮೂಲಕ ಉಡಾವಣೆಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಿದ್ಧತೆ ನಡೆಸುತ್ತಿದೆ.
ಸೂರ್ಯನ ಅತ್ಯಂತ ಹೊರಗಿನ ಮತ್ತು ಅತ್ಯಂತ ಬಿಸಿಯ ಪದರವಾದ ಸೌರ ಕೊರೋನಾದ ಅಧ್ಯಯನ ನಡೆಸುವ ಉದ್ದೇಶವನ್ನ ಈ ಮಹತ್ವಾಕಾಂಕ್ಷಿ ಯೋಜನೆ ಹೊಂದಿದೆ.
ಪ್ರೋಬಾ-1, ಪ್ರೋಬಾ-2 2001 ಮತ್ತು 2009ರಲ್ಲಿ ಕ್ರಮವಾಗಿ ಉಡಾವಣೆಗೊಂಡಿತ್ತು. ಪ್ರೋಬಾ-3ರ ಅಭಿವೃದ್ಧಿಗಾಗಿ ಸ್ಟೇನ್, ಬೆಲ್ಡಿಯಂ, ಪೋಲೆಂಡ್, ಇಟಲಿ ಮತ್ತು ಸ್ವಿಜರ್ಲೆಂಡ್‌ಗಳ ವಿಜ್ಞಾನಿಗಳು ತಯಾರಿ ನಡೆಸಿದ್ದರು, ಈಗ ಅದು ಸಂಪೂರ್ಣಗೊಂಡಿದೆ.
ಪ್ರೋಬಾ-3 ಉಡಾವಣೆಯ ಉದ್ದೇಶವೇನು?
ಅಂದಾಜು 200 ಮಿಲಿಯನ್ ಯೂರೋ (1 ಮಿಲಿಯನ್ ಯೂರೋ ಎಂದರೆ ಅಂದಾಜು 9.2 ಕೋಟಿ ರು.) ವೆಚ್ಚದಲ್ಲಿ ಪ್ರೋಬಾ-3 ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದು 2 ವರ್ಷಗಳ ಕಾಲ ಕಾರ್ಯಾಚರಿಸುವ ನಿರೀಕ್ಷೆಯಿದೆ. 2 ವರ್ಷದ ಅವಧಿಯಲ್ಲಿ ವಿಜ್ಞಾನಿಗಳು ಸರಿಸುಮಾರು 6 ಗಂಟೆಗಳ 50 ಕೃತಕ ಸೂರ್ಯ ಗ್ರಹಣಗಳನ್ನು ಕೃತಕವಾಗಿ ಉಂಟುಮಾಡಲಿದ್ದಾರೆ.
ಪ್ರೋಬಾ-3 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಸುತ್ತಲೂ ಸುತ್ತಲೂ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಭೂಮಿಗೆ ಅತ್ಯಂತ ಸನಿಹದ ಬಿಂದುವಿನಲ್ಲಿ (ಪೆರಿಜೀ) ಇದು ಭೂಮಿಯಿಂದ 600 ಕಿ.ಮೀ ದೂರದಲ್ಲಿದ್ದರೆ, ಭೂಮಿಗೆ ಅತ್ಯಂತ ದೂರದ ಬಿಂದುವಿನಲ್ಲಿ (ಅಪೊಜೀ) 60,530 ಕಿ.ಮೀ.ಗಳಷ್ಟು ದೂರದಲ್ಲಿರಲಿದೆ. ಪ್ರೋಬಾ-3 ಯೋಜನೆಯ ಅಭಿವೃದ್ಧಿ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿದೆ. ಇದರಲ್ಲಿ ಯುರೋಪಿನಾದ್ಯಂತ ಇರುವ 40ಕ್ಕೂ ಹೆಚ್ಚು ಕಂಪನಿಗಳ ಪಾತ್ರವಿದೆ. ಇಎಸ್ಎಯ 13 ಸದಸ್ಯ ರಾಷ್ಟ್ರಗಳು ಪ್ರೋಬಾ-3ಗೆ ಬೆಂಬಲ, ನೆರವು ನೀಡಿವೆ.
ಪ್ರೋಬಾ-3: ಭಾರತಕ್ಕಾಗುವ ಪ್ರಯೋಜನ:
ಪ್ರೋಬಾ-3 ಇಎಸ್ಎಯ ತಂತ್ರಜ್ಞಾನ ಪ್ರದರ್ಶಕ ಯೋಜನೆಯಾ ಗಿದೆ. ಇದರ ಉಡಾವಣೆಗಾಗಿ ಇಸ್ರೋವನ್ನು ಆಯ್ಕೆ ಮಾಡಿಕೊಂಡಿ ರುವುದು ಭಾರತದ ಬಾಹ್ಯಾಕಾಶ ಉಡಾವಣಾ ಸೇವೆ ಅತ್ಯಂತ ನಂಬಿಕಾರ್ಹವಾಗಿದೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಾವೀಣ್ಯತೆ ಬಹಳಷ್ಟು ಹೆಚ್ಚುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.