

ನವದೆಹಲಿ: ‘ಚಂದ್ರಯಾನ-4, ಗಗನಯಾನ, ವೀನಸ್ ಆರ್ಬಿಟಲ್ ಮಿಷನ್ ಇತ್ಯಾದಿ ಮಹತ್ವದ ಕಾರ್ಯಕ್ರಮಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಯೋಜನೆ ರೂಪಿಸಿದೆ. ಮುಖ್ಯವಾಗಿ ಹವಾಮಾನ ಅಧ್ಯಯನ, ವಿಪತ್ತು ನಿರ್ವಹಣಾ ವ್ಯವಸ್ಥೆ, ಸಂಪರ್ಕ ಸಾಧನಗಳು, ಸಂವಹನ ಉಪಗ್ರಹಗಳು ಮತ್ತು ಭೂ ಸರ್ವೆಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡಬೇಕಿದೆ. ಒಟ್ಟಿನಲ್ಲಿ, ನಾಗರಿಕರ ಜೀವನ ಮಟ್ಟ ಸುಧಾರಿಸಲು ಇಸ್ರೋ ಶ್ರಮಿಸುತ್ತಿದೆ’ಎಂದು ಇಸ್ರೋ ನಿಯೋಜಿತ ಅಧ್ಯಕ್ಷ ಡಾ.ವಿ. ನಾರಾಯಣನ್ ಹೇಳಿದ್ದಾರೆ.
‘41 ವರ್ಷದಿಂದ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲಸಕ್ಕೆ ಸೇರಿದಾಗ ಉನ್ನತ ಸ್ಥಾನಕ್ಕೇರುವ ಆಕಾಂಕ್ಷೆ ಇರಲಿಲ್ಲ. ಶ್ರಮಪಟ್ಟು ನನ್ನ ಕೆಲಸವನ್ನು ಮಾಡಿದ್ದೇನೆ. ಈಗ ಇಸ್ರೋ ಅಧ್ಯಕ್ಷನಾಗಿ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂಬುದರ ಅರಿವಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದ ನೇಮಕಾತಿಗಳ ಸಮಿತಿಯು ಹಿರಿಯ ವಿಜ್ಞಾನಿ, ರಾಕೆಟ್ ಪ್ರೊಪೆಲ್ಷನ್ ತಜ್ಞ ವಿ. ನಾರಾಯಣನ್ ಅವರನ್ನು ಇಸ್ರೋದ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಹಾಲಿ ಅಧ್ಯಕ್ಷ ಎಸ್. ಸೋಮನಾಥ್ ನಿವೃತ್ತಿಯ ಬಳಿಕ ಜ.14 ರಂದು ನಾರಾಯಣನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಮುಂದಿನ 2 ವರ್ಷ ಅಧ್ಯಕ್ಷರಾಗಿರಲಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮೆಲುಕಟ್ಟು ವಿಲೈನವರಾದ ನಾರಾಯಣನ್ 1984ರಲ್ಲಿ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ಗೆ ಸೇರುವ ಮೂಲಕ ಇಸ್ರೋದಲ್ಲಿ ಕಾರ್ಯಾರಂಭಿಸಿದರು. ಸದ್ಯ, ವಲೈಮಾಲಾದಲ್ಲಿರುವ ಲಿಕ್ವಿಡ್ ಪ್ರೊಪೆಲ್ಷನ್ ಸಿಸ್ಟಮ್್ಸ ಸೆಂಟರ್ ನಿರ್ದೇಶಕರಾಗಿದ್ದಾರೆ. ಅವರು ಇಸ್ರೋದ ಹಲವು ಕಾರ್ಯಕ್ರಮಗಳಿಗೆ 183 ಲಿಕ್ವಿಡ್ ಪ್ರೊಪೆಲ್ಷನ್ ಸಿಸ್ಟಮ್ಳನ್ನು ಮತ್ತು ಕಂಟ್ರೋಲ್ ಪವರ್ ಪ್ಲಾಂಟ್ಗಳನ್ನು ಒದಗಿಸಿದ್ದಾರೆ. ಚಂದ್ರಯಾನ -2, ಚಂದ್ರಯಾನ- 3, ಆದಿತ್ಯಯಾನ ಮತ್ತು ಜಿಎಸ್ಎಲ್ವಿ ಎಂಕೆ 3 ಯೋಜನೆಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2025ರಲ್ಲಿ ಇಸ್ರೋ ಪ್ರಮುಖ ಯೋಜನೆ