ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್​: ದಕ್ಷಿಣ ಗಾಜಾಗೆ ತೆರಳಲು ನಾಗರಿಕರಿಗೆ ಸೂಚನೆ

isrel war
Published on

ಟೆಲ್ ಅವೀವ್(ಇಸ್ರೇಲ್​): ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿ ಗುಂಪಿನ ನಡುವೆ ನಡೆಯುತ್ತಿರುವ ಸಂಘರ್ಷ 16 ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿತನಕ 4,741 ಪ್ಯಾಲೆಸ್ತೇನಿಯನ್ನರು, 1,400 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದಾರೆ. ಇದೇ ಸಂದರ್ಭ 15,898 ಮಂದಿ ಗಾಯಗೊಂಡಿದ್ದಾರೆ. ಇದರ ನಡುವೆ ಗಾಜಾ ಪಟ್ಟಿ ಮೇಲೆ ದಾಳಿ ತೀವ್ರಗೊಳಿಸುವುದಾಗಿ ಇಸ್ರೇಲ್ ಘೋಷಿಸಿದೆ.

ಭಾನುವಾರ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್‌ನಲ್ಲಿ ಮೇಲೆ ಇಸ್ರೇಲಿ ಪಡೆಗಳು ಬಾಂಬ್ ದಾಳಿ ನಡೆಸಿವೆ.

ಇಸ್ರೇಲಿ ರಕ್ಷಣಾ ಪಡೆಗಳ ಪ್ರಕಾರ, ಮೂರು ಹಂತದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ಈ ಯೋಜನೆಯ ಅಂತಿಮ ಹಂತವು ಗಾಜಾದಲ್ಲಿ "ಭದ್ರತಾ ಆಡಳಿತ" ವನ್ನು ಬದಲಾಯಿಸುವುದನ್ನು ಒಳಗೊಂಡಿರುತ್ತದೆ.

ಮತ್ತೊಂದು ಕಡೆ 200 ಟ್ರಕ್‌ಗಳು 3,000 ಟನ್‌ಗಳಷ್ಟು ನೆರವಿನ ಆಹಾರ, ಔಷಧ ಮತ್ತಿತರ ವಸ್ತುಗಳನ್ನು ಹೊತ್ತುಕೊಂಡು ಈಜಿಪ್ಟ್​ ಮತ್ತು ಗಾಜಾ ಗಡಿಯಲ್ಲಿ ಕಾಯುತ್ತಿವೆ, ಆದರೆ ಇಸ್ರೇಲ್​ ಗಡಿ ಬಂದ್​ ಮಾಡಿರುವುದರಿಂದ ಮಾರ್ಗದಲ್ಲೇ ಟ್ರಕ್​ಗಳು ಕಾಯುವಂತಾಗಿದೆ. ಇಸ್ರೇಲ್ ಲೆಬನಾನ್‌ನಲ್ಲಿನ ಹಿಜ್ಬೊಲ್ಲಾ ಗುರಿಗಳ ಮೇಲೆ ವಾಯುದಾಳಿ ಮಾಡಿದ್ದರಿಂದ ಗಡಿಯಾಚೆಗಿನ ಸಂಘರ್ಷವು ಉಲ್ಬಣಗೊಂಡಿತು.

ಗಾಜಾ ಬಿಟ್ಟು ಹೊರಡಿ: ಶೀಘ್ರ ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳಿ ಇಲ್ಲದಿದ್ದರೆ ನಿಮ್ಮನ್ನು ಉಗ್ರರೆಂದು

ಪರಿಗಣಿಸಬೇಕಾಗುತ್ತದೆ ಎಂದು ಪ್ಯಾಲೆಸ್ಟೀನಿಯನ್ನರಿಗೆ ಇಸ್ರೇಲ್ ತುರ್ತು ಎಚ್ಚರಿಕೆ ನೀಡಿದೆ. ಇಸ್ರೇಲ್ ರಕ್ಷಣಾ ಪಡೆಗಳ ಹೆಸರು ಮತ್ತು ಲೋಗೋದೊಂದಿಗೆ ಗುರುತಿಸಲಾದ ಕರಪತ್ರಗಳಲ್ಲಿ ಈ ಸಂದೇಶವನ್ನು ನೀಡಲಾಗಿದೆ. ಇದನ್ನು ಗಾಜಾ ಪಟ್ಟಿಯಾದ್ಯಂತ ಮೊಬೈಲ್ ಫೋನ್ ಆಡಿಯೊ ಸಂದೇಶಗಳ ಮೂಲಕ ಜನರಿಗೆ ಕಳುಹಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ನಾವು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ನಾಗರಿಕ ಹಾನಿಯನ್ನು ಕಡಿಮೆ ಮಾಡಲು, ಗಾಜಾ ಪಟ್ಟಿಯ ಉತ್ತರ ಪ್ರದೇಶದ ನಿವಾಸಿಗಳಿಗೆ ದಕ್ಷಿಣಕ್ಕೆ ಸ್ಥಳಾಂತರವಾಗುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net