More

    ಪ್ರಧಾನಿಯಾಗಿರಲು ಜಸ್ಟಿನ್ ಟ್ರುಡೊ ಅರ್ಹರಲ್ಲ: ಕೆನಡಾ ವಿರೋಧ ಪಕ್ಷ ನಾಯಕ ಪಿಯರೆ ಪೊಲಿಯೆವ್ರೆ ಟೀಕೆ

    ಒಟ್ಟಾವಾ: ಜಸ್ಟಿನ್ ಟ್ರುಡೊಗೆ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯತೆಯಿಲ್ಲ. ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಆತನಿಗೆ ಬೆಲೆಯಿಲ್ಲ. ಭಾರತದಲ್ಲಂತೂ ಆತ ನಗೆಪಾಟಿಲಿಗೆ ಈಡಾಗಿದ್ದಾನೆ ಎಂದು ಕೆನಡಾದ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ಪಿಯರೆ ಪೊಲಿಯೆವ್ರೆ ಟೀಕಿಸಿದರು.
    ನೇಪಾಳದ ಮಾಧ್ಯಮ ಸಂಸ್ಥೆ ನಮಸ್ತೆ ರೇಡಿಯೊ ಟೊರೊಂಟೊಗೆ ನೀಡಿದ ಸಂದರ್ಶನದಲ್ಲಿ ವಿರೋಧಿ ಕನ್ಸರ್ವೇಟಿವ್ ಪಕ್ಷದ ನಾಯಕ ಪೊಲಿಯೆವ್ರೆ ಪ್ರಧಾನಿ ಟ್ರುಡೊ ಅವರ ವಿದೇಶಾಂಗ ನೀತಿ ಮತ್ತು ಅವರ ಆಡಳಿತ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಇದನ್ನೂ ಓದಿ: ರಾಜಕೀಯ ಪ್ರಚಾರಕ್ಕೆ ಸೇನೆ ದುರ್ಬಳಕೆ; ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

    ಟ್ರುಡೊ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯರಲ್ಲ. 8 ವರ್ಷಗಳ ಟ್ರುಡೊ ಆಡಳಿತ ಎಲ್ಲಿಗೆ ಬಂದು ನಿಂತಿದೆ ಎಂದರೆ ಬೀಜಿಂಗ್ ನಮ್ಮ ದೇಶದಲ್ಲಿ ಹಸ್ತಕ್ಷೇಪ ಮಾಡುತ್ತಿದೆ, ನಮ್ಮ ಜನರನ್ನು ನಿಂದಿಸಲು ನಮ್ಮ ದೇಶದಲ್ಲೇ ಪೊಲೀಸ್ ಠಾಣೆಗಳನ್ನು ತೆರೆಯುತ್ತಿದೆ. ಟ್ರುಡೊ ಅವರನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ನಗೆಪಾಟಲಿನ ಮನುಷ್ಯ ಎಂದು ಪರಿಗಣಿಸಲಾಗಿದೆ. ಅಮೆರಿಕಾ ಅಧ್ಯಕ್ಷ ಜೋಬೈಡೆನ್​ ಡೋರ್‌ಮ್ಯಾಟ್‌(ಕಾಲಕಸ)ನಂತೆ ನಡೆಸಿಕೊಳ್ಳುತ್ತಿದ್ದಾರೆ. ಈತನಿಗೆ ಅವರು ಗೊಂಬೆಗೆ ಮಾಡುವಂತೆ ಕಪಾಳಮೋಕ್ಷ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಕಟುವಾಗಿ ಟೀಕಿಸಿದರು.
    “ಉಕ್ರೇನ್ ಅಧ್ಯಕ್ಷರು ನಮ್ಮ ಚೇಂಬರ್‌ನಲ್ಲಿದ್ದಾಗ, ಅವರು ನಾಜಿಯನ್ನು ಸಂಸತ್ತಿಗೆ ಕರೆತಂದಾಗ ಟ್ರೂಡೊ ಸರಿಯಾಗಿ ನಡೆದುಕೊಳ್ಳಲಿಲ್ಲ. ಪ್ರತಿದಿನ, ಪ್ರತಿ ವಿಷಯದಲ್ಲೂ ಜಸ್ಟಿನ್ ಟ್ರುಡೊ ಕೆನಡಾ ಮತ್ತು ಕೆನಡಿಯನ್ನರಿಗೆ ಮುಜುಗರವನ್ನುಂಟುಮಾಡುತ್ತಾರೆ. ಹೀಗಾಗಿ ನಾವು ಅವನನ್ನು ಪ್ರಧಾನಿಯಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.

    ಇನ್ನು 2025 ರ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಭಾರತದೊಂದಿಗೆ “ವೃತ್ತಿಪರ ಸಂಬಂಧವನ್ನು” ಮರುಸ್ಥಾಪಿಸಲಾಗುವುದು. ವಿವಾದಗಳಿಗೆ ಮಂಗಳಹಾಡಿ, ಸಂಬಂಧ ಪುನಃಸ್ಥಾಪಿಸುತ್ತೇವೆ ಎಂದರು.
    ಕೆನಡಾದಲ್ಲಿ ಹಿಂದು ದೇವಾಲಯ ಧ್ವಂಸ ಮತ್ತು ಹಿಂದುಗಳ ಮೇಲಿನ ದಾಳಿ ಖಂಡಿಸುತ್ತೇನೆ. ಸಾರ್ವಜನಿಕ ಸಮಾರಂಭಗಳಲ್ಲಿ ಭಾರತೀಯ ರಾಜತಾಂತ್ರಿಕರಿಗೆ ತೋರಿದ ಆಕ್ರಮಣವು ಸ್ವೀಕಾರಾರ್ಹವಲ್ಲ. ದಾಳಿ ಮಾಡುವ ಯಾರಿಗಾದರೂ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

    ಪಂಚರಾಜ್ಯ ಚುನಾವಣೆ: ತೆಲಂಗಾಣದ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಯಾರ್ಯಾರು ಕಣದಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts