More

    ಪಂಚರಾಜ್ಯ ಚುನಾವಣೆ: ತೆಲಂಗಾಣದ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಯಾರ್ಯಾರು ಕಣದಲ್ಲಿ?

    ಹೈದರಾಬಾದ್​: ಪಂಚರಾಜ್ಯ ಚುನಾವಣೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ತೆಲಂಗಾಣ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಇಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ತೆಲಂಗಾಣದಲ್ಲಿನ 119 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 52 ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಬಿಜೆಪಿ, ಇಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅಧ್ಯಕ್ಷತೆಯಲ್ಲಿ ಅ.20ರಂದು ನಡೆದ ಸಭೆಯಲ್ಲಿ ಈ ಹೆಸರುಗಳು ಅಂತಿಮಗೊಂಡಿದ್ದು, ಬಿಜೆಪಿ ಇಂದು ಮೊದಲ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

    ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ಸಂಸದ ಬಂಡಿ ಸಂಜಯ್ ಕುಮಾರ್​ ಸೇರಿದಂತೆ ಈ ಪಟ್ಟಿಯಲ್ಲಿ ಮೂವರು ಹಾಲಿ ಸಂಸದರು ಸ್ಥಾನ ಪಡೆದಿದ್ದಾರೆ. ಸಂಸದರಾದ ಸೋಯಂ ಬಾಪು ರಾವ್ ಹಾಗೂ ಧರ್ಮಪುರಿ ಅರವಿಂದ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಇದನ್ನೂ ಓದಿ: ಆ ವಿಷಯವಾಗಿ ಭಾರತದಲ್ಲಿ ಯಾವತ್ತೂ ಯುದ್ಧವಾಗಿಲ್ಲ: ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

    ಹಾಲಿ ಮೂವರೂ ಶಾಸಕರ ಹೆಸರು ಕೂಡ ಈ ಪಟ್ಟಿಯಲ್ಲಿ ಇದೆ. ಆ ಪೈಕಿ ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಪಕ್ಷದಿಂದ ಅಮಾನತುಗೊಂಡಿದ್ದ ಶಾಸಕ ಟಿ. ರಾಜಾ ಸಿಂಗ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರ ಅಮಾನತು ತೆರವಾಗಿತ್ತು.

    ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಎತಲ ರಾಜೇಂದರ್ ಕೂಡ ಮೊದಲ ಪಟ್ಟಿಯಲ್ಲಿದ್ದಾರೆ. ಮತ್ತೊಂದೆಡೆ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನ. 30ರಂದು ನಡೆಯಲಿದ್ದು, ಡಿ. 3ರಂದು ಫಲಿತಾಂಶ ಪ್ರಕಟವಾಗಲಿದೆ.

    ಚಡ್ಡಿ ಧರಿಸಿ ರಸ್ತೆ ಬದಿ ಕಾಣಿಸಿಕೊಂಡ ‘ರಜಿನಿಕಾಂತ್’!: ವಿಡಿಯೋ ವೈರಲ್; ಅಸಲಿ ವಿಷಯ ಏನು? ಇಲ್ಲಿದೆ ವಿವರ‌

    ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts