

ಬೆಂಗಳೂರು: ಕಣ್ಣಿನಲ್ಲಿನ ಬಿಳಿ ಭಾಗ ಕೆಂಪಗಾಗುವಿಕೆ ಅಥವಾ ಕಣ್ಣುಬೇನೆಯೂ ಕರೊನಾ ಲಕ್ಷಣಗಳಲ್ಲಿ ಒಂದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕಣ್ಣುಬೇನೆ ಇರುವವರೆಲ್ಲ ಸೋಂಕಿತರು ಎಂದು ಪರಿಗಣಿಸಲಾಗುವುದಿಲ್ಲ. ಈ ಲಕ್ಷಣ ಶೇ. 1ರಿಂದ 3ರಷ್ಟು ರೋಗಿಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ ಕಣ್ಣುಬೇನೆ ಸಮಸ್ಯೆಯಿಂದ ಬಳಲುತ್ತಿರುವವರೂ ಕರೊನಾ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.
ಕರೊನಾದಿಂದ ಗುಣಮುಖರಾದವರಲ್ಲಿ ಶಾಶ್ವತ ಶ್ವಾಸಕೋಶ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ನೆದರ್ಲೆಂಡ್‌ನಲ್ಲಿ ಕರೊನಾದಿಂದ ಗುಣಮುಖರಾದವರಲ್ಲಿ ಈ ರೀತಿ ಸಮಸ್ಯೆ ಕಂಡು ಬರುತ್ತಿದೆ.
ಶ್ವಾಸಕೋಶಗಳ ಸಾಮರ್ಥ್ಯ ಕಡಿಮೆಯಾಗಿ ಅವರು ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಶ್ವಾಸಕೋಶಗಳು ಕುಗ್ಗಿ ಅವುಗಳ ಅಂಗಾಶಗಳು ಗಟ್ಟಿಯಾಗುತ್ತವೆ. ಇದರಿಂದ ಆಮ್ಲಜನಕ ಪಡೆಯಲು ಕಷ್ಟವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.