More

    ದಂಡು ದಂಡಾಗಿ ಬಂದಿರುವ ಮಿಡತೆಗಳಿಂದ ಸಮಸ್ಯೆಯಾಗದು: ವಿಜ್ಞಾನಿಗಳ ತಂಡದ ಸ್ಪಷ್ಟನೆ ಹೀಗಿದೆ…

    ಕೋಲಾರ: ಈಗಾಗಲೇ ಮಹಾಮಾರಿ ಕರೊನಾದಿಂದ ಕಂಗಾಲಾಗಿದ್ದ ರೈತರಿಗೆ, ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡ ಮಿಡತೆಗಳು ಇನ್ನಷ್ಟು ಆತಂಕಕ್ಕೀಡು ಮಾಡಿತ್ತು, ಇದೀಗ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸುವ ಮೂಲಕ ರೈತರ ಆತಂಕಕ್ಕೆ ತೆರೆ ಎಳೆದಿದ್ದಾರೆ. ಇದ್ರಿಂದ ರೈತರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.

    ಇದನ್ನೂ ಓದಿ: ಗ್ರಾ.ಪಂ. ಚುನಾವಣೆ ಮುಂದೂಡಿದ್ದಕ್ಕೆ ಆಯೋಗ, ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

    ಉತ್ತರ ಭಾರತದ ರಾಜ್ಯಗಳಲ್ಲಿ ಮಿಡತೆಗಳು ಆರ್ಭಟ ಜೋರಾಗುತ್ತಿರುವುದರ ನಡುವೆ, ನಿನ್ನೆ ಸಂಜೆ ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಳ ರಸ್ತೆ ಪಕ್ಕದಲ್ಲಿ ಮಿಡತೆಗಳ ಹಿಂಡು ಕಾಣಿಸಿಕೊಂಡಿವೆ. ಹಸಿರು ಮಿಶ್ರಿತ ಬಣ್ಣವನ್ನು ಹೋಲುವ ಮಿಡತೆಗಳು, ರಸ್ತೆ ಬದಿಯ ಎರಡು ಎಕ್ಕದ ಗಿಡ ಹಾಗೂ ವಿದ್ಯುತ್ ಕಂಬಕ್ಕೆ ಅಂಟಿಕೊಳ್ಳುವುದರ ಮೂಲಕ ನೋಡುಗರಲ್ಲಿ ಭೀತಿ ಎದುರಾಗಿತ್ತು. ಜತೆಗೆ ಮಿಡತೆಗಳು ಉತ್ತರ ಭಾರದ ರಾಜ್ಯಗಳಲ್ಲಿ ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳನ್ನ ನಾಶ ಮಾಡಿದ್ದರಿಂದಾಗಿ, ಇಲ್ಲಿನ ರೈತರಲ್ಲಿ ಆತ‌ಂಕ ಶುರುವಾಗಿತ್ತು. ಈ ಹಿನ್ನಲೆ ಕೃಷಿ ವಿಜ್ಞಾನ ಕೇಂದ್ರ, ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

    ಇವು ಹೆಚ್ಚಾಗಿ ಎಕ್ಕದ ಗಿಡದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮಿಡತೆಗಳಾಗಿದ್ದು, ಇದ್ರಿಂದ ಯಾವುದೇ ಬೆಳೆಗಳಿಗೆ ಹಾನಿಯಾಗುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

    ಇದನ್ನೂ ಓದಿ: ಬಿಎಸ್‌ವೈ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ನೇಮಕ ಸಾಧ್ಯತೆ

    ಇನ್ನು ಕೆವಿಕೆ ವಿಜ್ಞಾನಿಗಳ‌ ತಂಡ ಹಾಗೂ ಕೇಂದ್ರ ಐಪಿಎಂ ವಿಜ್ಞಾನಿಗಳ ತಂಡ, ಇವು ಕ್ಯಾಲೋಟ್ರೋಫಿಸ್ ಗ್ರಾಸೋಫರ್ ಮಿಡತೆಗಳಾಗಿದ್ದು ರೈತರ ಬೆಳೆಗಳಿಗೆ ಯಾವುದೇ ತೊಂದರೆಯಾವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ರು. ಜತೆಗೆ ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆಗಳಿಗೂ ಕೋಲಾರದಲ್ಲಿ ಕಂಡು ಬಂದ ಮಿಡತೆಗಳಿಗೂ ಯಾವುದೇ ಸಂಭಂದವಿಲ್ಲದ ಪರಿಣಾಮ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ರು.

    ಪೊಲೀಸರ ಶ್ರಮದ ದುಡ್ಡನ್ನು ಪೊಲೀಸರೇ ದೋಚಿದ ಕತೆ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts