ಸಂಘಗಳ ಸಹಕಾರ ಸಿಕ್ಕರೆ ರೈತರ ಪ್ರಗತಿ

1 Min Read
ಸಂಘಗಳ ಸಹಕಾರ ಸಿಕ್ಕರೆ ರೈತರ ಪ್ರಗತಿ
ಚನ್ನಗಿರಿ ತಾಲೂಕು ದೇವರಹಳ್ಳಿಯಲ್ಲಿ ಸಹಕಾರ ಸಂಘದ ನೂತನ ಗೋದಾಮಿನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಆರ್. ಷಣ್ಮುಖಪ್ಪ ಲೋಕಾರ್ಪಣೆಗೊಳಿಸಿದರು. ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ, ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಎನ್. ಸ್ವಾಮಿ, ದೇವರಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ತಾಪಂ ಮಾಜಿ ಅಧ್ಯಕ್ಷ ಎ.ಎಸ್. ಬಸವರಾಜಪ್ಪ ಇದ್ದರು.

ಚನ್ನಗಿರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೃಷಿಗೆ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಆರ್. ಷಣ್ಮುಖಪ್ಪ ಹೇಳಿದರು.

ತಾಲೂಕಿನ ದೇವರಹಳ್ಳಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಅಪೆಕ್ಸ್ ಬ್ಯಾಂಕ್ ಅನುದಾನದಲ್ಲಿ ನಿರ್ಮಿಸಿರುವ ಗೋದಾಮು ಲೋಕಾರ್ಪಣೆಗೊಳಿಸಿ ಸೋಮವಾರ ಮಾತನಾಡಿದರು.

ಸಹಕಾರ ಸಂಘಗಳು ಕಾಲಮಿತಿಯಲ್ಲಿ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸಿದರೆ ಅನುಕೂಲವಾಗುತ್ತದೆ. ಸಂಘದ ಮೂಲಕ ನೀಡುವ ಶೂನ್ಯಬಡ್ಡಿ ದರದ ಮಧ್ಯಮಾವಧಿ, ದೀರ್ಘಾವದಿ ಸಾಲ ಸೌಲಭ್ಯವನ್ನು ಕೃಷಿಯಲ್ಲಿ ತೊಡಗಿಸಿದರೆ ರೈತರು ಅರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರು.

ರೈತರು ಪಡೆವ ಸಾಲವನ್ನು ಉದ್ದೇಶಿತ ಕೆಲಸಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಾಲ ಮರುಪಾವತಿಸಲಾಗದೆ ಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾದರೆ ಸಹಕಾರ ಸಂಘಗಳು ನಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿ 182 ಸಹಕಾರ ಸಂಘಗಳಿದ್ದು, ರೈತರ ಅಭಿವೃದ್ಧಿಗೆ ತಮದೇ ಕೊಡುಗೆ ನೀಡುತ್ತಾ ಬಂದಿವೆ ಎಂದರು.

ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರ ಮತ್ತು ಶಾಸಕರು ಯಾರೇ ಇರಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ನನ್ನ ಅವಧಿಯಲ್ಲಿ ದೇವರಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೆ. ಇದುವರೆಗೆ ಕಾಮಾಗಾರಿ ಪೂರ್ಣವಾಗಿಲ್ಲ. ಇಂದಿನ ಶಾಸಕರು ಕಾಮಾಗಾರಿ ಪೂರ್ಣಗೊಳಿಸಿ ಜನರ ಅನುಕೂಲಕ್ಕೆ ನೀಡಬೇಕು. ಇಲ್ಲದಿದ್ದರೆ ಹಣ ವ್ಯರ್ಥವಾಗಲಿದೆ ಎಂದರು.

ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಎನ್. ಸ್ವಾಮಿ, ದೇವರಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷಮ್ಮ, ತಾಪಂ ಮಾಜಿ ಅಧ್ಯಕ್ಷ ಎ.ಎಸ್. ಬಸವರಾಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎ.ಆರ್. ರಂಗನಾಥ್, ಡಿ.ಆರ್. ರಾಜಪ್ಪ, ವಿಜಯಲಕ್ಷ್ಮಿ, ಜಿ.ಎಂ. ಗೊರಪ್ಪ ಇದ್ದರು.

See also  ಶಿಂಗಟಾಲೂರು ಗ್ರಾಮದಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ
Share This Article