ಕುಂಭಮೇಳದಲ್ಲಿ ತಿರುಗಾಡುತ್ತಿರುವ ಹ್ಯಾರಿ ಪಾಟರ್‌! ವಿಡಿಯೋ ನೋಡಿ...Harry Potter at Maha Kumbh Mela

Harry Potter at Maha Kumbh Mela
Published on

Harry Potter at Maha Kumbh Mela :  ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ.  ಪ್ರಯಾಗ್ ರಾಜ್‌ನಲ್ಲಿ ಆರಂಭವಾದ ಈ ಅದ್ಧೂರಿ ಆಚರಣೆಗೆ ಅಪಾರ ಸಂಖ್ಯೆಯ ಭಕ್ತರು, ಸಾಧುಗಳು ಮತ್ತು ಅಘೋರಿಗಳು ಆಗಮಿಸುತ್ತಿದ್ದಾರೆ.  ಈ ಮಹಾ ಕುಂಭಮೇಳದ ಸಂಭ್ರಮದಲ್ಲಿ ಹುಡುಗಿಯೊಬ್ಬಳು ವಿಶೇಷ ಆಕರ್ಷಣೆಯಾಗಿದ್ದಳು. ಇದೀಗ  ಹಾಲಿವುಡ್​​ ನಟನನ್ನು ಹೊಲುವ ವ್ಯಕ್ತಿಯೊಬ್ಬ ಕಾಣಿಸಿಕೊಂಡ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ಪ್ರಸ್ತುತ ಯುಗದಲ್ಲಿ, ಸೋಶಿಯಲ್​ ಮೀಡಿಯಾದಿಂದ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ. ಕುಂಭಮೇಳದಲ್ಲಿ ವ್ಯಕ್ತಿಯೊಬ್ಬ ಹ್ಯಾರಿ ಪಾಟರ್ ನಂತೆ ಕಾಣುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಜನರು ಅವನನ್ನು ಹ್ಯಾರಿ ಪಾಟರ್ ಎಂದು ಕರೆಯುತ್ತಾರೆ ಏಕೆಂದರೆ ಅವನು ಹ್ಯಾರಿ ಪಾಟರ್ ಚಲನಚಿತ್ರಗಳ ನಾಯಕನಂತೆ ಕಾಣುತ್ತಾನೆ.

ಡೇನಿಯಲ್ ರಾಡ್‌ಕ್ಲಿಫ್ ( Daniel Radcliffe ) ಎನ್ನುವ ನಟ ಹ್ಯಾರಿ ಪಾಟರ್​​ ಎನ್ನುವ ಹಾಲಿವುಡ್​​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್​ ಹಿಟ್​ ಆಗಿದ್ದು ಗೊತ್ತೆ ಇದೆ.  ಈ ಸಿನಿಮಾದ ಹ್ಯಾರಿ ಪಾಟರ್​ ಪಾತ್ರವನ್ನು ಹೊಲುವ ವ್ಯಕ್ತಿಯೊಬ್ಬ ಕುಂಬಮೇಳದಲ್ಲಿ ರೆಸ್ಟೋರೆಂಟ್‌ನಲ್ಲಿ ಭಾರತೀಯ ಭಕ್ತರೊಂದಿಗೆ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿರುವ ವ್ಯಕ್ತಿ ಹಾಲಿವುಡ್ ನ ಖ್ಯಾತ ನಟ ಡೇನಿಯಲ್ ರಾಡ್ ಕ್ಲಿಫ್ ಅವರಂತೆ ಕಾಣುತ್ತಿದ್ದಾರೆ. ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ಅವನನ್ನು ವಿಭಿನ್ನವಾಗಿ ನೋಡುತ್ತಾರೆ. ಈ ವೀಡಿಯೋದಲ್ಲಿ ಆ ವ್ಯಕ್ತಿ ಅಲ್ಲಿನ ರೆಸ್ಟೊರೆಂಟ್‌ನಲ್ಲಿ ಆಹಾರವನ್ನೂ ಖರೀದಿಸಿ ತಿಂದು ಆನಂದಿಸಿದ್ದಾರೆ.ಈ ವೀಡಿಯೊ ನೋಡಿದ ನೆಟ್ಟಿಗರು ಕೂಡಾ ರಾಶಿ.. ರಾಶಿ ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net