'ಜವಾನ್'​ ನಿರ್ದೇಶಕನ ವಿರುದ್ಧ ನಟಿ ನಯನತಾರ ಅಸಮಾಧಾನ!; ಅಷ್ಟಕ್ಕೂ ಇದಕ್ಕೆ ಕಾರಣವೇನು?

Untitled design - 2023-09-21T195402.472
Published on

ಮುಂಬೈ: ನಟ ಶಾರೂಖ್​ ಖಾನ್ ಮತ್ತು ನಯನತಾರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಜವಾನ್'​ ಸೆ.07 ರಂದು ಜಾಗತಿಕವಾಗಿ ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್​ನಲ್ಲಿ 600 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಕಾಣುವ ಮುಖೇನ ಹೊಸ ದಾಖಲೆಯತ್ತ ಸಾಗುತ್ತಿದೆ. ಈ ಖುಷಿಯಲ್ಲಿರುವ ಚಿತ್ರತಂಡಕ್ಕೆ ಇದೀಗ ವ್ಯಾಪಕವಾಗಿ ಹರಿದಾಡುತ್ತಿರುವ ವದಂತಿಯೊಂದು ತೀವ್ರ ಗೊಂದಲ ಉಂಟುಮಾಡಿದೆ.

'ಜವಾನ್'​ ಮುಖೇನ ಬಾಲಿವುಡ್​ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಹುಭಾಷಾ ತಾರೆ ನಯನತಾರ, ಚಿತ್ರದ ನಿರ್ದೇಶಕ ಅಟ್ಲೀ ಕುಮಾರ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವದಂತಿ ಹರಿದಾಡಿದೆ.

ವದಂತಿಯ ಪ್ರಕಾರ, ಸಿನಿಮಾದಲ್ಲಿ ಅಟ್ಲಿ ತಮಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಕೊಡುವ ಬದಲಿಗೆ ದೀಪಿಕಾ ಪಡುಕೋಣೆಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೂಲಗಳ ಪ್ರಕಾರ, ನಯನತಾರ ಮತ್ತು ಅಟ್ಲಿ ನಡುವೆ ಯಾವುದೇ ದ್ವೇಷವಿಲ್ಲ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರೊಂದಿಗೆ ನಟಿಸಲು ನಿರ್ದೇಶಕರು ಕೊಟ್ಟ ಅವಕಾಶಕ್ಕಾಗಿ ನಟಿ ಹಲವು ಬಾರಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ವರದಿ ಮಾಹಿತಿ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net