More

    ಕ್ರೀಡೆಗಳಲ್ಲಿ ಸಂಭ್ರಮಿಸಿದ ಗದಗ-ಬೆಟಗೇರಿ ನಗರಸಭೆ ಸ್ವಚ್ಛತಾ ಸಿಬ್ಬಂದಿ

    ಗದಗ: ನಮ್ಮ ನಗರ ಹಾಗೂ ನೆರೆಹೊರೆಯ ಪ್ರದೇಶವನ್ನು ಸ್ವಚ್ಛವಾಗಿಡುವಲ್ಲಿ ಸ್ವಚ್ಛತಾ ಸಿಬ್ಬಂದಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಮ್ಮ ಯೋಗಕ್ಷೇಮ ಹಾಗು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರು ರಜೆ ತೆಗೆದುಕೊಳ್ಳದೆ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಇವರಿಗಾಗಿಯೇ ಗದಗ-ಬೆಟಗೇರಿ ನಗರಸಬೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

    ಪೌರ ಕಾರ್ಮಿಕರ ದಿನಾಚರಣೆ ಹಾಗೂ ಸ್ವಚ್ಛತಾ ಲೀಗ್​ ಪ್ರಯುಕ್ತ ಸೆಪ್ಟೆಂಬರ್​ 18 ಹಾಗೂ 19ರಂದು ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 500ಕ್ಕೂ ಹೆಚ್ಚು ಪೌರ ಕಾರ್ಮಿಕರು ಆಟೋಟ ಸ್ಪರ್ಧೆಯಲ್ಲಿ ಭಾಗುಯಾಗಿ ಸಂಭ್ರಮಿಸಿದ್ದು, ವಿಶೇಷವಾಗಿತ್ತು. ಎರಡು ದಿನಗಳ ಕಾಲ ನಡೆದ ಕ್ರೀಡಾಕುಟ ಸ್ಪರ್ಧೆಯಲ್ಲಿ ಗದಗ-ಬೆಟಗೇರರಿ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

    Municipality day

    ಇದನ್ನೂ ಓದಿ: ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್​ ತೀರ್ಪು ಅಂತಿಮ: ತಮಿಳುನಾಡು ಸಚಿವ ದೊರೈ ಮುರುಗನ್

    ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನೈರ್ಮಲ್ಯವಾಗಿಡುವ ಅವರ ಪ್ರಯತ್ನ ಸಾಮಾನ್ಯವಾಗಿ ಎಲ್ಲರ ಗಮನಕ್ಕೆ ಬರುವುದಿಲ್ಲ. ಸ್ವಚ್ಛತಾ ಪಖವಾಡವು ಆ ನಿರೂಪಣೆಯನ್ನು ಬದಲಾಯಿಸಲು ಪ್ರಯತ್ನಿಸಿತು, ಅವರ ಶ್ರಮವನ್ನು ಆಚರಿಸುವ ವೇದಿಕೆಯನ್ನು ಒದಗಿಸಿತು ಮತ್ತು ಅವರ ಕೊಡುಗೆಗಳನ್ನು ಸ್ವಚ್ಛತಾ ಲೀಗ್​ ಮೂಲಕ ಗುರುತಿಸಲಾಯಿತು. ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿಯನ್ನು ಸಹ ಮೂಡಿಸಲಾಯಿತು.

    ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ನಮ್ಮ ನೆರೆ ಹೊರೆಯನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವವರಿಗಾಗಿ ಈ ಕ್ರೀಡಾಕೂಟ ಆಯೋಜಿಸಿದ್ದು, ಎಲ್ಲರ ಗಮನ ಸೆಳೆದಿದೆ. ಈ ರೀತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರಬೇಕೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts