

ಬೆಂಗಳೂರು: 2023ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ (Congress Party) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ (Shakti Scheme) ಕೂಡ ಒಂದಾಗಿದ್ದು, ರಾಜ್ಯಾದ್ಯಂತ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ. ಯೋಜನೆ ಜಾರಿಯಾಗಿ ಒಂದೂವರೆ ವರ್ಷಕ್ಕೂ ಅಧಿಕ ಸಮಯವಾಗಿದ್ದು, ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ಮಹಿಳೆಯರಿಗಾಗಿ ಜಾರಿ ಮಾಡಲಾಗಿರುವ ಈ ಯೋಜನೆಯ (Shakti Scheme) ಕುರಿತು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು ಪರ-ವಿರೋಧದ ಚರ್ಚೆಯನ್ನ ಹುಟ್ಟುಹಾಕಿದೆ.
ಕೆಲ ದಿನಗಳ ಹಿಂದಷ್ಟೇ ಬಸ್ ದರ ಏರಿಸುವ ಮೂಲಕ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ದೊಡ್ಡ ಶಾಕ್ ನೀಡಿತ್ತು. ಹಲವರು ಪುರುಷರಿಂದ ಕಿತ್ತುಕೊಂಡ ಮಹಿಳೆಯರಿಗೆ ಇವರು ಊಚಿತವಾಗಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಿಡಿಕಾರಿದ್ದರು. ಇದೀಗ ಕಿರಣ್ ಕುಮಾರ್ ಎಂಬುವವರು ಶಕ್ತಿ ಯೋಜನೆಯ (Shakti Scheme) ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಬೆಂಗಳೂರಿನಿಂದ ಮೈಸೂರಿಗೆ ಮುಂಜಾನೆ ಬಸ್ ಹತ್ತಿದೆ. ₹210 ದರ, ಆರಾಮದಾಯಕ KSRTC ಬಸ್ ಮತ್ತು ವೇಗದ ಪ್ರಯಾಣಕ್ಕಾಗಿ ವಿಶ್ವ ದರ್ಜೆಯ ಹೆದ್ದಾರಿ. ಆದರೆ, ನನಗೆ ಕೆಲವು ಆಲೋಚನೆಗಳು ಬಂದವು ಎಂದು ಕೆಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
ಇನ್ನೂ ಅನೇಕ ಆಲೋಚನೆಗಳಿವೆ ಆದರೆ ನಾವು ಮತಕ್ಕಾಗಿ ಬಿಟ್ಟಿಗಳ ವಿಷವರ್ತುಲವನ್ನು ಪ್ರವೇಶಿಸಿದ್ದೇವೆ ಎಂದು ಅರಿವಾಯಿತು. ಮುಂದಿನ ದಿನಗಳಲ್ಲಿ ಅದರಿಂದ ಹೊರಬರುವುದು ಕಷ್ಟ ಎಂದು ಕಿರಣ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈವರೆವೂ 1.2 ಮಿಲಿಯನ್ ವೀವ್ಸ್ ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯನ್ನ ಹುಟ್ಟುಹಾಕಿದೆ. ಹಲವರು ಕಿರಣ್ ಅವರ ಪೋಸ್ಟ್ಅನ್ನು ಬೆಂಬಲಿಸಿ ಕಮೆಂಟ್ ಹಾಕಿದ್ದರೆ ಮತ್ತಷ್ಟು ಮಂದಿ ಇವರ ಪೋಸ್ಟ್ಅನ್ನು ಖಂಡಿಸಿದ್ಧಾರೆ.