

ನವದೆಹಲಿ: ಉದ್ಯೋಗಾಕಾಂಕ್ಷಿಗಳು ತಮ್ಮ ಅತ್ಯುತ್ತಮ ಸಾಮರ್ಥ್ಯಗಳ ಬಗ್ಗೆ ತಿಳಿಸಲು ರೆಸ್ಯೂಮ್ಅನ್ನು(CV) ತಯಾರು ಮಾಡುವುದು ಅತಿಮುಖ್ಯ ಕೆಲಸವಾಗಿದೆ. ಈ ಡಾಕ್ಯುಮೆಂಟ್ನ ಆಧಾರದ ಮೇಲೆ ಒಬ್ಬರು ಆ ಕೆಲಸಕ್ಕೆ ಸೂಕ್ತ ಅಥವಾ ಇಲ್ಲವೇ ಎಂಬುದನ್ನು ಕಂಪನಿಯವರು ನಿರ್ಧರಿಸುತ್ತಾರೆ. ಇದೀಗ ವ್ಯಕ್ತಿಯೊಬ್ಬರು ಎಐ (AI)ಮೂಲಕ ತಯಾರಿಸಿದ ರೆಸ್ಯೂಮ್ ತಮ್ಮ ಕೈ ಹೇಗೆ ಹಿಡಿಯಿತು ಎಂಬುದರ ಬಗ್ಗೆ ಹೇಳಿಕೊಂಡಿದ್ದು, ಇದರಿಂದಾದ ಅನುಕೂಲವನ್ನು ಹಂಚಿಕೊಂಡಿದ್ದಾರೆ.
ಕೃತಕ ಬುದ್ದಿಮತ್ತೆ (AI) ಇಂದಿನ ಟ್ರೆಂಡ್ನಲ್ಲಿ ಅತ್ಯಂತ ಲಾಭದಾಯಕ ಎಂದು ಪರಿಗಣಿಸಲಾಗಿದ್ದು, ಜನರು ಹೆಚ್ಚು ಎಐನ ಮೊರೆ ಹೋಗುತ್ತಿದ್ದಾರೆ. ಇದರಲ್ಲಿ ಲಾಭವೂ ಇದೆ ಮತ್ತು ಅಪಾಯವೂ ಇದೆ. ಇದೀಗ ವ್ಯಕ್ತಿಯೊಬ್ಬರು ಎಐನಿಂದ ತಮ್ಮಗಾದ ಲಾಭವನ್ನು ಸಾಮಾಜಿಕ ಮಾಧ್ಯಮ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ವಿವರಿಸಿದ್ದಾರೆ.
ರೆಡ್ಡಿಟ್ನಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡುವುದಾದರೆ, ನಾನು ಮಲಗುವ ಮುನ್ನ ಕೆಲಸಕ್ಕೆ ಅರ್ಜಿ ಹಾಕುವುದಕ್ಕೆ ಎಐ ಬಾಟ್ ತಯಾರಿಸಿ ಅದಕ್ಕೆ ಅನುಮತಿ ನೀಡಿದೆ. ನಾನು ಮಲಗಿದ್ದಾಗ ರಾತ್ರಿಯಿಡೀ ಎಐ (AI) ಮೂಲಕ ಸಾವಿರಕ್ಕೂ ಅಧಿಕ ಕಂಪನಿಗಳಿಗೆ ಕೆಲಸಕ್ಕೆ ಅರ್ಜಿ ಹಾಕಲಾಗಿದ್ದು, 50ಕ್ಕೂ ಹೆಚ್ಚು ಕಂಪನಿಯವರು ನನಗೆ ಕರೆ ಮಾಡಿದ್ದಾರೆ. ಒಂದು ಎಐ ಬಾಟ್ (AI) ನನಗೆ ಇಷ್ಟೆಲ್ಲಾ ಸಹಕಾರಿಯಾಯ್ತು. ಸಂದರ್ಶಕರು ಕೇಳಿದ ಪ್ರಶ್ನೆಗೆ ಎಐ ಬಾಟ್ ಸರಿಯಾಗಿ ಉತ್ತರಿಸಿದ್ದು, ನನಗೆ ಕಂಪನಿಗಳಿಂದ ಆಫರ್ ಬರುತ್ತಿವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.