ಸಮೀಪಿಸುತ್ತಿದೆ ಭೂಮಿಯ ಅಂತ್ಯ? ಇನ್ನೂ ಇಷ್ಟೇ ವರ್ಷಗಳು... ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು | Earth End

Earth End
Published on

Earth End : ಇಡೀ ಜಗತ್ತು ಅಳಿದು ಹೋಗಲಿದೆ ಎಂದು ಆಗಾಗ ಭವಿಷ್ಯವಾಣಿ ಹೇಳುವುದನ್ನು ನೀವು ಕೇಳಿರುತ್ತೀರಿ. ಈ ಹಿಂದೆ 2021 ಡಿಸೆಂಬರ್​ 21ಕ್ಕೆ ಭೂಮಿ ಅಂತ್ಯವಾಗಲಿದೆ ಎಂದಿದ್ದರು. ಆದರೆ, ಅದು ಸುಳ್ಳಾಯಿತು. ಇನ್ನು ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಪ್ರಕಾರ 5079ಕ್ಕೆ ಜಗತ್ತು ಕೊನೆಯಾಗುತ್ತದೆ ಎಂದಿದ್ದಾರೆ. ಆದರೆ, ನಿಜವಾಗುತ್ತಾ ಎಂದು ತಿಳಿಯಲು ನಾವೇ ಇರುವುದಿಲ್ಲ. ಅದೇನೆ ಇರಲಿ ಇದೀಗ ವಿಜ್ಞಾನಿಗಳು ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಭೂಮಿಯ ಮೇಲೆ ಮನುಷ್ಯರು, ಪ್ರಾಣಿಗಳು ಸೇರಿದಂತೆ ಯಾವುದೇ ಜೀವರಾಶಿಗಳು ಉಳಿಯಲು ಸಾಧ್ಯವಾಗದ ಪರಿಸ್ಥಿತಿ ಶೀಘ್ರದಲ್ಲೇ ಬರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನೀವು ಗಮನಿಸಿರಬಹುದು, ಕಳೆದ ವರ್ಷದಿಂದ ಕೆಲವೆಡೆ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇವೆ. ಕಂಪ್ಯೂಟರ್ ಸಿಮ್ಯುಲೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ವರದಿಯಲ್ಲಿ, 250 ಮಿಲಿಯನ್ ವರ್ಷಗಳ ನಂತರ ಭೂಮಿಯ ಮೇಲೆ ತೀವ್ರ ಪ್ರವಾಹ ಉಂಟಾಗಲಿದೆ ಎಂದು ತಿಳಿದುಬಂದಿದೆ.

Earth End

ಪ್ರಾಕೃತಿಕ ವಿಕೋಪದಿಂದಾಗಿ ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಯಾವುದೇ ಜೀವಿಗಳು ಭೂಮಿಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ. ಭೂಮಿ ಸಂಪೂರ್ಣ ನಾಶವಾಗಲಿದೆ ಎಂದು ವಿಜ್ಞಾನಿಗಳು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಕೆಲವು ವರ್ಷಗಳಲ್ಲಿ ಭೂಮಿಯ ಉಷ್ಣತೆಯು 70 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಜೀವಿಗಳು ಈ ಪರಿಸರದಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮಾನವರು ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳು ಕಣ್ಮರೆಯಾಗುತ್ತವೆ ಎಂದು ವಿಜ್ಞಾನಿಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಭೂಮಿಯ ಮೇಲಿನ ಇಂಗಾಲದ ಪ್ರಮಾಣವು ಶಾಖಕ್ಕಿಂತ ಹೆಚ್ಚಾಗಲಿದ್ದು, ಇದರಿಂದಾಗಿ ಭೂಮಿಯು ನಾಶವಾಗಬಹುದು. ಇದೇ ರೀತಿಯ ಘಟನೆ 66 ಮಿಲಿಯನ್ ವರ್ಷಗಳ ಹಿಂದೆ ನಡೆದಿತ್ತು. ಈ ಸಮಯದಲ್ಲಿ ಭೂಮಿಯ ಮೇಲಿದ್ದ ದೈತ್ಯಕಾರದ ಡೈನೋಸಾರ್‌ಗಳು ನಾಶವಾದವು. ಸಂಶೋಧಕ ಅಲೆಕ್ಸಾಂಡರ್ ಫಾರ್ನ್ಸ್‌ವರ್ತ್ ಅವರ ಪ್ರಕಾರ, ಹಿಂದೆ ಜಗತ್ತಿನಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣವು ಈಗಿನದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು ಎಂದಿದ್ದಾರೆ.

Earth End

ಜ್ವಾಲಾಮುಖಿಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತವೆ. ಇದರಿಂದ ಜನರು ಉಸಿರಾಡಲು ಪರದಾಡುವಂತಾಗಲಿದ್ದು, ಭೂಮಿಯ ಮೇಲಿನ ಜೀವನವು ಹೆಚ್ಚು ಕಷ್ಟಕರವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದೆಲ್ಲ ನಿಜವಾಗುತ್ತಾ ಎಂದು ತಿಳಿಯಲು ನಾವೇ ಇರುವುದಲ್ಲಿ ಎಂಬುದು ಮಾತ್ರ ಸತ್ಯ ಸಂಗತಿ. ಆದರೂ, ಭೂಮಿಯ ಉಳಿವಿಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂಬುದನ್ನು ಮರೆಯಬಾರದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net