

.ನವದೆಹಲಿ: ರಾಜಧಾನಿ ನವದೆಹಲಿ ಮೂಲದ ರಿಸೋರ್ಸ್ಫುಲ್ ಆಟೋಮೊಬೈಲ್ ಕಂಪನಿಯು ಕೇವಲ 12 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯೊಂದಿಗೆ ಐಪಿಓ (ಇನಿಶಿಯಲ್ ಪಬ್ಲಿಕ್ ಆಫರಿಂಗ್) ಬಿಡುಗಡೆ ಮಾಡಿತ್ತು. ಆದರೆ, ಅಚ್ಚರಿ ಎಂಬಂತೆ 4800 ಕೋಟಿ ರೂಪಾಯಿ ಮೌಲ್ಯದ ಬಿಡ್ಗಳು ಬಂದವು. ಕೇವಲ ಎರಡು ಶೋರೂಮ್ಳು ಮತ್ತು 8 ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯ ಐಪಿಓ ಓವರ್ಸಬ್ಸ್ಕ್ರಿಪ್ಶನ್ ಅಚ್ಚರಿ ಮೂಡಿಸಿದೆ. ಈ ಕಂಪನಿಯ ಷೇರುಗಳು ಆಗಸ್ಟ್ 29ರಂದು ಮಾರುಕಟ್ಟೆಯಲ್ಲಿ ಎಸ್ಎಮ್ ವಿಭಾಗದಲ್ಲಿ ಲಿಸ್ಟಿಂಗ್ ಆಗಿವೆ. ಆದರೆ, ‘ಇಶ್ಯು ಪ್ರೖೆಸ್ ಬ್ರಾ್ಯಂಡ್’ನಡಿ ಲಿಸ್ಟ್ ಆಯಿತಾದರೂ (ಪ್ರತಿ ಷೇರಿಗೆ 117 ರೂ.), ಹೂಡಿಕೆದಾರರಿಗೆ ತಕ್ಷಣಕ್ಕೆ ಯಾವುದೇ ಲಾಭವಾಗಲಿಲ್ಲ. ಆ ಬಳಿಕದ ವಹಿವಾಟಿನಲ್ಲಿ ಷೇರು ಬೆಲೆ 124 ರೂ.ಗೆ ಸ್ಥಿರಗೊಂಡಿದೆ.
ಏನಾಯಿತು?: ದೆಹಲಿ ಮೂಲದ ಈ ಕಂಪನಿಯು ಯಮಹಾ ಮೋಟಾರ್ಬೈಕ್ಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತದೆ. ನವದೆಹಲಿಯಲ್ಲಿ ಸಾಹ್ನಿ ಆಟೋಮೊಬೈಲ್ಸ್ ಹೆಸರಿನಲ್ಲಿ ಎರಡು ಶೋರೂಮ್ಳನ್ನು ಈ ಕಂಪನಿ ಹೊಂದಿದೆ. ಈ ಎರಡೂ ಶೋರೂಮ್ಳಲ್ಲಿ ಇರುವ ಉದ್ಯೋಗಿಗಳ ಸಂಖ್ಯೆ ಕೇವಲ 8. 2018ರಲ್ಲಿ ಆರಂಭಗೊಂಡಿರುವ ರಿಸೋರ್ಸ್ಫುಲ್ ಆಟೋಮೊಬೈಲ್ ಆಗಸ್ಟ್ 22ರಂದು ಐಪಿಒ ಸಲ್ಲಿಸಿತ್ತು. ಹೂಡಿಕೆದಾರರು ಆಗಸ್ಟ್ 28ರವರಗೆ ಹೂಡಿಕೆ ಮಾಡಿದಾಗ, ಸಂಗ್ರಹಗೊಂಡದ್ದು 4,768.88 ಕೋಟಿ ರೂ.
ಕಂಪನಿಯ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ, ರಿಸೋರ್ಸ್ಫುಲ್ ಆಟೋಮೊಬೈಲ್ ಐಪಿಒ ಆದಾಯವನ್ನು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಎರಡು ಹೊಸ ಶೋರೂಮ್ಳನ್ನು ತೆರೆಯಲು ಮತ್ತು ಸಾಲ ಮರುಪಾವತಿ ಹಾಗೂ ಕಾರ್ಯನಿರತ ಬಂಡವಾಳದ ಅಗತ್ಯಗಳನ್ನು ಒಳಗೊಂಡಂತೆ ತನ್ನ ಕಾರ್ಯಾಚರಣೆಗಳ ವಿಸ್ತರಣೆಗೆ ಬಳಸಲು ಯೋಜಿಸಿದೆ. ರಿಸೋರ್ಸ್ಫುಲ್ ಆಟೋಮೊಬೈಲ್ಸ್ ಐಪಿಓ ಕ್ರೇಜ್ಗೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಓವರ್ಸಬ್ಸ್ಕ್ರಿಪ್ಶನ್ ಆಗಿದ್ದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.