ಎಲ್​ಇಡಿ ಲೈಟ್​ ತಯಾರಿಸುವ ಕಂಪನಿಯ ಪೆನ್ನಿ ಸ್ಟಾಕ್​ನಲ್ಲಿ ಹೂಡಿಕೆ: 3 ತಿಂಗಳಲ್ಲೇ 233.97%ರಷ್ಟು ಗಳಿಕೆ

art-1
Published on

ಮುಂಬೈ: ಪೆನ್ನಿ ಸ್ಟಾಕ್​ಗಳು ಹೂಡಿಕೆದಾರರಿಗೆ ಕೆಲವೊಮ್ಮೆ ಬಂಪರ್​ ಲಾಭವನ್ನೇ ನೀಡುತ್ತವೆ. ಕಡಿಮೆ ಬೆಲೆಯ ಷೇರುಗಳನ್ನು ಪೆನ್ನಿ ಸ್ಟಾಕ್​ ಎನ್ನುತ್ತಾರೆ. ಇಂತಹ ಒಂದು ಪೆನ್ನಿ ಸ್ಟಾಕ್​ ಮೂರೇ ತಿಂಗಳಲ್ಲಿ ಹೂಡಿಕೆದಾರರಿಗೆ 233.97%ರಷ್ಟು ಲಾಭ ನೀಡಿದೆ.

ಈ ಪೆನ್ನಿ ಸ್ಟಾಕ್​ ಬೆಟ್​ ಮಾಡುವುದನ್ನು ಅನೇಕ ಹೂಡಿಕೆದಾರರು ಈಗಲೂ ಮುಂದುವರಿಸಿದ್ದಾರೆ.

ಈ ಷೇರಿನ ಬೆಲೆ ಈಗ 58.11 ರೂಪಾಯಿಗೆ ಏರಿಕೆ ಕಂಡಿದೆ. ಶುಕ್ರವಾರ (ಜ. 19) ಇದರ ಬೆಲೆ 2.63 (4.74%) ರೂಪಾಯಿ ಹೆಚ್ಚಾಗಿದೆ. ಐದು ತಿಂಗಳ ಹಿಂದೆ ಈ ಷೇರಿನ ಬೆಲೆ 17 ರೂಪಾಯಿಗೆ ಆಸುಪಾಸಿನಲ್ಲಿತ್ತು. ಈ ಷೇರುಗಳಲ್ಲಿನ ಹೂಡಿಕೆಯು ಒಂದು ವರ್ಷದಲ್ಲಿ 495.39%ರಷ್ಟು ಲಾಭ ನೀಡಿದೆ.

ಈ ಕಂಪನಿಯ ಉತ್ಪನ್ನಗಳಲ್ಲಿ ಮೂನ್ ಎಲ್ಇಡಿ ಸರ್ಫೇಸ್ ಲೈಟ್ಸ್, ಎಲ್ಇಡಿ ಸ್ಪಾಟ್ ಲೈಟ್ಸ್, ಎಲ್ಇಡಿ ಎಸಿ ಸ್ಟ್ರೀಟ್ ಲೈಟ್ಸ್, ಎಲ್ಇಡಿ ಪ್ಲಾಸ್ಟಿಕ್ ಬಾಡಿ ಪ್ಯಾನಲ್ ಲೈಟ್ಸ್, ಎಲ್ಇಡಿ ಆರ್ಕಿಟೆಕ್ಚರಲ್ ಲೈಟ್ಸ್, ಎಲ್ಇಡಿ ಡೌನ್ಲೈಟ್ಸ್, ಗಾರ್ಡನ್/ಕಾಂಪೌಂಡ್ ಲೈಟಿಂಗ್, ಸೌರ ಚಾಲಿತ ಹೋಮ್ ಎಲ್ಇಡಿ ಲೈಟಿಂಗ್ ಸಿಸ್ಟಮ್ಸ್ ಮತ್ತು ಎಲ್ಇಡಿ ಆಧಾರಿತ ಬೀದಿ ದೀಪಗಳು ಪಾದಚಾರಿ/ ವಾಕ್-ಥ್ರೂ ಸೂಚನೆ ದೀಪಗಳು ಸೇರಿವೆ. ಪ್ರಸ್ತುತ, ಈ ಕಂಪನಿಯ ಎಲ್ಇಡಿ ದೀಪಗಳಿಗೆ ಸಾಕಷ್ಟು ಬೇಡಿಕೆಯಿದೆ.

ಈ ಕಂಪನಿಯ ಲಾಭದ ಬೆಳವಣಿಗೆಯು ಅಂದಾಜು 156 ಪ್ರತಿಶತ ಇದೆ. ಈ ಕಂಪನಿಯಲ್ಲಿ ಪ್ರವರ್ತಕರ ಷೇರು ಪಾಲು 72% ಇದೆ.

ಸೌರ ಶಕ್ತಿ ಬೆಳಕಿನ ಹೊಸ ಕ್ಷೇತ್ರಗಳ ಕಡೆಗೆ ಈಗ ಕಂಪನಿಯ ಗಮನ ಕೇಂದ್ರೀಕೃತವಾಗಿವೆ. ಇಂತಹ ಉಪಕ್ರಮಗಳು ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶವನ್ನು ಒದಗಿಸಬಹುದಾಗಿದೆ. ಈ ಕಂಪನಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net