ಡೊನಾಲ್ಡ್ ಟ್ರಂಪ್‌ನನ್ನು ಕೊಂದೇ ತೀರುತ್ತೇವೆ: ಖಮೇನಿ ಅಂತ್ಯಕ್ರಿಯೆಯಲ್ಲಿ ಇರಾನ್ ಶಪಥ; ವಿಡಿಯೋ ವೈರಲ್! Iran Threat Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಹತ್ಯೆ ಮಾಡುವುದಾಗಿ ಖಮೇನಿ ಬೆಂಬಲಿಗರ ಶಪಥ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಹತ್ಯೆ ಮಾಡುವುದಾಗಿ ಖಮೇನಿ ಬೆಂಬಲಿಗರ ಶಪಥ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ
  • ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಹತ್ಯೆ ಮಾಡುವುದಾಗಿ ಖಮೇನಿ ಬೆಂಬಲಿಗರ ಶಪಥ
  • ಅಮೆರಿಕ-ಇರಾನ್ ಶಾಂತಿ ಒಪ್ಪಂದ ಮುರಿದುಬೀಳುವ ಆತಂಕ
ತೆಹ್ರಾನ್​: ಕಳೆದೊಂದು ನಾಲ್ಕು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಸನ್ನಿವೇಶವಿತ್ತು. ನಂತರ ಅಮೆರಿಕ ಮತ್ತು ಇರಾನ್​ ಶಾಂತಿ ಮಾತುಕತೆಗೆ ಮುಂದಾದ ಹಿನ್ನಲೆ ಪರಿಸ್ಥಿತಿ ಈಗ ತಿಳಿಗೊಂಡಿದೆ.
ಹೀಗಾಗಿ ನಾಲ್ಕು ತಿಂಗಳ ಹಿಂದೇ ಸಾವನ್ನಪ್ಪಿದ್ದ ಇರಾನ್​ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಅಂತ್ಯಕ್ರಿಯೆ ಆರಂಭವಾಗಿದೆ. ಜುಲೈ 3 ರಿಂದ ಆರಂಭವಾಗಿರುವ ಈ ಕಾರ್ಯಕ್ರಮಕ್ಕೆ ಜಗತ್ತಿನ ನಾನಾ ದೇಶದ ಪ್ರತಿನಿಧಿಗಳು ಹಾಗೂ ಖಮೇನಿ ಅಭಿಮಾನಿಗಳು ಪಾಲ್ಗೊಳ್ಳುತ್ತಿದ್ದಾರೆ.

ಟ್ರಂಪ್​ನನ್ನು ಕೊಂದು ತಿರುತ್ತೇವೆ!

ಈದೀಗ ಖಮೇನಿ ಅಂತ್ಯಸಂಸ್ಕಾರದ ಸಮಾರಂಭದಲ್ಲಿ ಅಮೆರಿಕ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತೆವೆ ಎಂಬ ಘೋಷಣೆ ಕೇಳಿರುತ್ತಿದೆ. ತಮ್ಮ ಮಾಜಿ ಸುಪ್ರೀಂ ಲೀಡರ್​ ಆಯತೊಲ್ಲಾ ಅಲಿ ಖಮೇನಿಯ ಸಾವಿಗೆ ಕಾರಣನಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ನನ್ನು ಕೊಲ್ಲುವುದೇ (Iran Threat Donald Trump) ನಮ್ಮ ಪರಮೊಚ್ಚ ಗುರಿ ಎಂದು ಹೇಳುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ನಮ್ಮ ನಾಯಕನ ಸಾವಿಗೆ ಕಾರಣನಾದವನನ್ನು ಕ್ಷಮಿಸಲು ಸಾಧ್ಯವೇ? ಖಂಡಿತವಾಗಿ ಇಲ್ಲ. ಇರಾನ್​ ತನ್ನ ಸೇಡನ್ನು ತೀರಿಸಿಕೊಳ್ಳುತ್ತದೆ. ಡೊನಾಲ್ಡ್​ ಟ್ರಂಪ್​ನನ್ನು ನಾವು ಕೊಂದು ಖಮೇನಿ ಸಾವಿಗೆ ಪ್ರತೀಕಾರವನ್ನು ತೆಗೆದುಕೊಳ್ಳುತ್ತೆವೆಂದು ವ್ಯಕ್ತಿಯೊಬ್ಬ ಜನರನ್ನುದ್ದೇಶಿಸಿ ಮಾತನಾಡಿದ್ದಾನೆ.

ಒಪ್ಪಂದ ಮುರಿದು ಬೀಳುತ್ತಾ?

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಇರಾನ್​ ಮತ್ತು ಅಮೆರಿಕ ಜೊತೆ ನಡೆದಿರುವ ಶಾಂತಿ ಒಪ್ಪಂದ ಮುರಿದು ಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್​ನನ್ನು ಕೊಲ್ಲಲು ಇರಾನ್​ ಪ್ರಯತ್ನ ಪಟ್ಟರೆ ಸುಮ್ಮನಿರುವ ಜಾಯಮಾನ ಅಮೆರಿಕದ್ದಲ್ಲ.
ಅಮೆರಿಕ ಮತ್ತೆ ಇರಾನ್​ ಮೇಲೆ ದಾಳಿ ಮಾಡಿದರೆ ಜಗತ್ತು ಇದರಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ ಹಾಗಾಯೇ ಮತ್ತೊಮ್ಮೆ ಈ ಸಂಘರ್ಷ ಆರಂಭವಾದರೆ ಮತ್ತೆ ಶಾಂತಿ ಎನ್ನುವುದು ಸಾಧ್ಯವಿಲ್ಲ ಎನ್ನುವುದು ಜಾತಗಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net